ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ನೇತ್ರಾವತಿ ವಲಯ, ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಾಮೂಹಿಕ ಗೋಪೂಜಾ ಕಾರ್ಯಕ್ರಮವು ನ.10ರಂದು ಉಪ್ಪಿನಂಗಡಿ ಸಮೀಪದ ಕೊಯಿಲ ಕುಮಾರಧಾರಾ ಸರಕಾರಿ ಗೋಶಾಲೆಯಲ್ಲಿ ನಡೆಯಿತು.
ಪುತ್ತೂರು ತಾಲೂಕಿನ 180ಕ್ಕೂ ಅಧಿಕ ಯೋಗಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಬ್ರಾಹ್ಮೀ ಮುಹೂರ್ತದಲ್ಲಿ ಸಾಮೂಹಿಕ ಯೋಗಾಭ್ಯಾಸ ನಡೆಸಿದರು. ಶರಣ್ಯ ಅವರು ಶಿಕ್ಷಣ ವಿಧಿಯನ್ನು ನೆರವೇರಿಸಿದರು. ಬಳಿಕ ರವಿಶಂಕರ್ ಅವರು ಗೋವಿನ ಮಹತ್ವ ಹಾಗೂ ಗೋಪೂಜೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ನಂತರ ಯೋಗಬಂಧುಗಳು ಒಗ್ಗೂಡಿ ಗೋಶಾಲೆಯ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು, ಗೋವುಗಳ ಸ್ವಚ್ಛತೆಯನ್ನೂ ಮಾಡಿದರು. ಬಳಿಕ ಸಾಮೂಹಿಕವಾಗಿ ಗೋಪೂಜೆ ನೆರವೇರಿಸಿ ಪುನೀತರಾದರು. ಮುರಳೀಧರ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ರ್ಯಕ್ರಮದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಹಾಗೂ ತಾಲೂಕು ಪ್ರಮುಖರು ಉಪಸ್ಥಿತರಿದ್ದರು.









