ಪುತ್ತೂರು: ಮಂಗಳವಾರ (ಜು. 7) ಸುರಿದ ಭಾರೀ ಗಾಳಿ-ಮಳೆಯ ಪರಿಣಾಮ ನಗರದ ಎಲ್ಮುಡಿ ಪ್ರದೇಶದಲ್ಲಿರುವ ಯೆಲ್ತಿಮಾರ್ ಟ್ರೇಡರ್ಸ್ ಎದುರು, ಹಿಮಾ ರೆಫ್ರಿಜರೇಟರ್ಸ್ ಮಾಲೀಕರಾದ ರಾಜೇಶ್ ಅವರ ಮನೆಯ ಕಾಂಪೌಂಡ್ ಬದಿಯಲ್ಲಿದ್ದ ಬೃಹತ್ ಮರ ಉರುಳಿ ಬಿದ್ದಿದೆ.ಮರ ಉರುಳಿದ ಪರಿಣಾಮ ವಿದ್ಯುತ್ ತಂತಿಗಳು ಹಾಗೂ ಇಂಟರ್‌ನೆಟ್ ಕೇಬಲ್‌ಗಳಿಗೆ ಹಾನಿಯಾಗಿದೆ. ಅಲ್ಲದೆ ಸಮೀಪದ ಎಸಿ ವರ್ಕ್‌ಶಾಪ್‌ನ ಹಂಚಿಗೂ ಹಾನಿಯಾಗಿದೆ.ಘಟನೆ ಸಂಭವಿಸಿದ ವೇಳೆ ಸ್ಥಳದಲ್ಲಿ ಜನರು ಅಥವಾ ವಾಹನಗಳು ಇಲ್ಲದಿದ್ದುದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.







