ಬಾಕ್ಸಾಫೀಸ್‌ನಲ್ಲಿ ಇತಿಹಾಸ ಸೃಷ್ಟಿ ಮಾಡಲೇ ಬೇಕು ಅಂತ ಪಟ್ಟು ಹಿಡಿದು ನಿರ್ಮಾಣ ಮಾಡಿದ ಸಿನಿಮಾ ‘ಪುಷ್ಪ 2’. ಅಲ್ಲು ಅರ್ಜುನ್ ವೃತ್ತಿ ಬದುಕಿನಲ್ಲಿ ಅತೀ ದುಬಾರಿ ಸಿನಿಮಾ ಕೂಡ ಹೌದು. ಫಸ್ಟ್ ಡೇ ಬಾಕ್ಸಾಫೀಸ್‌ನಲ್ಲಿ ಈಗಿರುವ ಎಲ್ಲಾ ದಾಖಲೆಗಳನ್ನು ಮುರಿದು ಹಾಕುತ್ತೇವೆ ಎಂದು ‘ಪುಷ್ಪ 2’ ತಂಡ ಹೊರಟಿತ್ತು.

ಅದರಲ್ಲಿ ಅಲ್ಲು ಅರ್ಜುನ್ ಟೀಮ್ ಯಶಸ್ವಿಯಾಗಿದೆ.

‘ ಪುಷ್ಪ 2’ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನೇ ಬರೆದಿದೆ. ಈಗ ಈ ದಾಖಲೆಯನ್ನು ಮುರಿದು ಇನ್ನೊಂದು ಇತಿಹಾಸವನ್ನು ಸೃಷ್ಟಿಸುವುದಕ್ಕೆ ಮತ್ತೊಂದು ‘ಕೆಜೆಎಫ್’, ಮತ್ತೊಂದು ‘ಬಾಹುಬಲಿ’, ಮತ್ತೊಂದು ‘ಜವಾನ್’ ಡಬಲ್ ಪವರ್‌ನಲ್ಲಿ ಬರಬೇಕು. ಪೇಯ್ಡ್ ಪ್ರೀಮಿಯರ್, ಅಡ್ವಾನ್ಸ್ ಬುಕಿಂಗ್‌ಗೆ ವಿಶ್ವದಲ್ಲಿ ಬಹುತೇಕ ಕಡೆಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದರಿಂದ ಫಸ್ಟ್ ಕಲೆಕ್ಷನ್ ಕೂಡ ಅದ್ಭುತವಾಗಿದೆ.

ಇಲ್ಲಿವರೆಗೂ ಟ್ರೇಡ್ ಎಕ್ಸ್‌ಪರ್ಟ್‌ಗಳು ಕೊಟ್ಟ ಲೆಕ್ಕವನ್ನು ವರದಿ ಮಾಡಲಾಗಿತ್ತು. ಎರಡನೇ ದಿನದ ಅಂತ್ಯದ ವೇಳೆಗೆ ‘ಪುಷ್ಪ 2’ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಅಧಿಕೃತವಾಗಿ ಮೊದಲ ದಿನದ ಗಳಿಕೆಯನ್ನು ರಿವೀಲ್ ಮಾಡಿದೆ. ವಿಶ್ವದಾದ್ಯಂತ ತಮ್ಮ ಸಿನಿಮಾ ಇತಿಹಾಸವನ್ನು ಸೃಷ್ಟಿಸಿದೆ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ. ಮೊದಲ ದಿನ ‘ಪುಷ್ಪ 2’ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ನಿರ್ಮಾಣ ಸಂಸ್ಥೆ ಕೊಟ್ಟ ಲೆಕ್ಕವೇನು? ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಪುಷ್ಪ 2′ ಬಿಡುಗಡೆಗೂ ಮುನ್ನ ದೊಡ್ಡ ಕ್ರೇಜ್ ಅನ್ನು ಹುಟ್ಟಾಕಿತ್ತು. ಅದೇ ಕ್ರೇಜ್ ಬಾಕ್ಸಾಫೀಸ್‌ನಲ್ಲಿ ಇತಿಹಾಸವನ್ನು ಬರೆದಿದೆ. ಆದರೆ, ಫಸ್ಟ್ ಡೇ ಫಸ್ಟ್ ಶೋ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಎರಡನೇ ದಿನ ಕಲೆಕ್ಷನ್ ಡ್ರಾಪ್ ಆಗಿದೆ ಅನ್ನೋ ಮಾತು ಓಡಾಡುತ್ತಿದೆ. ಸದ್ಯಕ್ಕೆ ಮೈತ್ರಿ ಮೂವಿ ಮೇಕರ್ಸ್ ಘೋಷಣೆ ಮಾಡಿಕೊಂಡಂತೆ ಈ ಸಿನಿಮಾ ₹294 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ನಿಜಕ್ಕೂ ಇದು ಭಾರತೀಯ ಸಿನಿಮಾರಂಗದ ಇತಿಹಾಸದಲ್ಲೇ ಹೊಸ ದಾಖಲೆ ಎಂದು ಹೇಳಬಹುದು. ಈಗಾಗಲೇ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದ ‘ಕೆಜಿಎಫ್ 2’, ‘ಬಾಹುಬಲಿ 2’, ‘ಜವಾನ್’ ಅಂತಹ ಸಿನಿಮಾಗಳ ಮೊದಲ ದಿನದ ದಾಖಲೆಯನ್ನು ಉಡೀಸ್ ಮಾಡಿದೆ. ಇನ್ನು ಎರಡೇ ದಿನಕ್ಕೆ ಈ ಸಿನಿಮಾ ₹400 ಕೋಟಿಯ ಗಡಿಯನ್ನು ದಾಟಲಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

ಟ್ರೇಡ್ ಎಕ್ಸ್‌ಪರ್ಟ್ ಮನೊಬಾಲ ವಿಜಯಬಾಲನ್ ತನ್ನ ಎಕ್ಸ್‌ ಖಾತೆಯಲ್ಲಿ ‘ಪುಷ್ಪ 2’ ಮೊದಲ ದಿನದ ಕಲೆಕ್ಷನ್ ರಿಪೋರ್ಟ್ ಅನ್ನು ಹಂಚಿಕೊಂಡಿದ್ದರು. ಹೆಚ್ಚು ಕಡಿಮೆ ಚಿತ್ರತಂಡ ಅನೌನ್ಸ್ ಮಾಡಿದ ಕಲೆಕ್ಷನ್‌ಗೆ ಇದು ಹೋಲಿಕೆಯಾಗಿದೆ. ಇವರ ಪ್ರಕಾರ, ಅಲ್ಲು ಅರ್ಜುನ್ ಸಿನಿಮಾ ಮೊದಲ ದಿನ ₹281.91 ಕೋಟಿ ಕಲೆಕ್ಷನ್ ಮಾಡಿದೆ. ಇದೇ ವೇಳೆ ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಕಲೆಕ್ಷನ್ ಅನ್ನೋದನ್ನು ಶೇರ್ ಮಾಡಿದ್ದಾರೆ.

ಮನೊಬಾಲ ವಿಜಯಬಾಲನ್ ಶೇರ್ ಮಾಡಿದ ವರ್ಲ್ಡ್‌ವೈಡ್ ಬಾಕ್ಸಾಫೀಸ್‌ ಬ್ರೇಕ್ ಹೀಗಿದೆ. ಆಂಧ್ರ ಹಾಗೂ ತೆಲಂಗಾಣದಿಂದ ₹92.36 ಕೋಟಿ ಕಲೆಕ್ಷನ್ ಆಗಿದೆ. ತಮಿಳುನಾಡು ₹10.71 ಕೋಟಿ, ಕರ್ನಾಟಕ ₹17.89 ಕೋಟಿ, ಕೇರಳ ₹6.56 ಕೋಟಿ, ಉತ್ತರ ಭಾರತದಲ್ಲಿ ₹87.24 ಕೋಟಿ ಹಾಗೇ ಓವರ್‌ಸೀಸ್‌ನಲ್ಲಿ ₹68.15 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!