ಮ ನೆಗಳ ಗೋಡೆಗಳ ಮೇಲೆ ಕೆಂಪು ಅಥವಾ ನೀಲಿ ಬಣ್ಣದ ನೀರಿನಿಂದ ತುಂಬಿದ ಪ್ಲಾಸ್ಟಿಕ್ ಬಾಟಲಿಗಳನ್ನು ನೇತು ಹಾಕಿರುವುದನ್ನು ನೀವು ನೋಡಿರಬಹುದು.ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಫೋಟೋಗಳ ಜೊತೆಗೆ, ಮನೆಯ ಗೋಡೆಗಳ ಮೇಲೆ ಕೆಂಪು-ನೀಲಿ ಪ್ಲಾಸ್ಟಿಕ್ ಬಾಟಲಿಗಳನ್ನು ನೇತುಹಾಕುವುದರಿಂದ ಹಾವುಗಳು ಅಥವಾ ನಾಯಿಗಳು ಬರೋದಿಲ್ಲ ಎಂದು ಬರೆಯಲಾಗುತ್ತದೆ.
ಜನರು ಈತರ ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಪೋಸ್ಟ್ ಮಾಡಿದಾಗ ಅದನ್ನು ಅನೇಕರು ನಂಬುತ್ತಾರೆ. ಆದರೆ ಇದರ ಸತ್ಯಾಸತ್ಯತೆ ಏನು ಅನ್ನೋದು ಅನೇಕ ಮಂದಿಗೆ ಗೊತ್ತಿಲ್ಲ.
ಕೆಂಪು-ನೀಲಿ ಪ್ಲಾಸ್ಟಿಕ್ ಬಾಟಲಿಗಳು
ನೀರಿಗೆ ನೀಲಿ ಬಣ್ಣ ಬೆರೆಸಿ ಪ್ಲಾಸ್ಟಿಕ್ ಬಾಟಲಿಗಳನ್ನು ತುಂಬಿಸಿ ಮನೆ ಮುಂದೆ ನೇತು ಹಾಕಿದರೆ ನಾಯಿ, ಹಾವುಗಳು ಬರೋದಿಲ್ಲ ಎಂದು ಜನರು ಹೇಳುತ್ತಾರೆ. ಅದನ್ನು ಮನೆಯ ಹೊರಗೆ ಬಾಗಿಲು ಅಥವಾ ಗೋಡೆಯ ಮೇಲೆ ನೇತುಹಾಕಿದಾಗ ಈ ನೀಲಿ ಬಣ್ಣವು ಹಾವು, ನಾಯಿಗಳು ಮನೆಯ ಬಳಿ ಬರದಂತೆ ತಡೆಯುತ್ತದೆ ಎಂದು ಜನರು ನಂಬುತ್ತಾರೆ. ಇದನ್ನು ನೋಡಿದ ನಾಯಿಗಳು ಹಾವುಗಳು ಅಲ್ಲಿಂದ ಸಓಡಿ ಹೋಗುತ್ತವೆ. ಇದರಿಂದ ಮನೆಯ ಸುತ್ತ ಮುತ್ತರ ಯಾವುದೇ ಭಯ ಇರೋದಿಲ್ಲ ಎಂದು ಹೇಳುತ್ತಾರೆ.
ಹಾವುಗಳು, ನಾಯಿಗಳು ಇತರ ಬಣ್ಣಗಳಿಗಿಂತ ನೀಲಿ ಬಣ್ಣವನ್ನು ಹೆಚ್ಚು ಸ್ಪಷ್ಟವಾಗಿ ನೋಡುತ್ತದೆ ಎಂದು ಅನೇಕ ಜನರು ನಂಬುತ್ತಾರೆ. ಇದು ಎಷ್ಟು ನಿಜ ಅನ್ನೋದು ಅನೇಕರಿಗೆ ಗೊತ್ತಿಲ್ಲ. ಬಹುಶಃ ಆ ನಾಯಿಗಳು ಹಾವುಗಳು ಆ ಬಣ್ಣವನ್ನು ನೋಡಿ ಅಲ್ಲಿ ಏನಾದರೂ ಅಪಾಯವಿದೆ ಎಂದು ಭಾವಿಸುತ್ತವೆ. ಇದರಿಂದಾಗಿ ಅವುಗಳು ಕೆಂಪು ನೀಲಿ ಬಣ್ಣವನ್ನು ನೋಡಿದ ನಂತರ ಹತ್ತಿರ ಹೋಗುವುದಿಲ್ಲ. ಇದೇ ಕಾರಣಕ್ಕೆ ಮನೆಗಳ ಹೊರಗೆ ನೀಲಿ ಬಾಟಲಿಗಳು ನೇತಾಡುತ್ತಿವೆ ಎನ್ನಲಾಗುತ್ತದೆ.
ವಿಜ್ಞಾನ ಏನು ಹೇಳುತ್ತದೆ?
ಈಗ ಪ್ರಶ್ನೆ ಏನೆಂದರೆ, ಇದರ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಅನ್ನೋದು. ವಿಜ್ಞಾನದ ಪ್ರಕಾರ, ನಾಯಿಗಳು ಬಣ್ಣವನ್ನು ಗುರುತಿಸಲು ವಿಫವಾಗುತ್ತದೆ. ಅಂದರೆ, ನಾಯಿಗಳಿಗೆ ಬಣ್ಣಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ, ನೀವು ಸರಳ ಭಾಷೆಯಲ್ಲಿ ಅರ್ಥಮಾಡಿಕೊಂಡರೆ ನೀಲಿ ಬಾಟಲಿಯನ್ನು ನೇತುಹಾಕುವುದರಿಂದ ನಾಯಿಗಳು ಮನೆಯ ಬಳಿ ಬರದಂತೆ ತಡೆಯುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ.
ಇಷ್ಟು ಮಾತ್ರವಲ್ಲದೆ ಅನೇಕರು ತಮ್ಮ ಮನೆಯ ಹೊರಗೆ ನಾಯಿಗಳಿಗಾಗಿ ನೀಲಿ ಬಣ್ಣದ ಬಾಟಲಿಗಳನ್ನು ನೇತು ಹಾಕುತ್ತಿದ್ದಾರೆ. ವಾಸ್ತವವಾಗಿ, ಅನೇಕ ಮನೆಗಳ ಹೊರಗೆ ನೀಲಿಯ ಜೊತೆಗೆ ಕೆಂಪು ಬಣ್ಣದ ಬಾಟಲಿಗಳ ನೇತಾಡುತ್ತಿರುವುದು ಕಂಡುಬರುತ್ತದೆ. ಆದರೆ ನಾಯಿ, ಹಾವುಗಳು ನೀಲಿ ಅಥವಾ ಕೆಂಪು ಯಾವುದೇ ಬಣ್ಣದ ಬಾಟಲಿಗಳ ಬಳಿ ಬರುವುದಿಲ್ಲ ಎಂದು ಸಾಬೀತುಪಡಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.