ಪತಿಯಿಂದ ಅಂತರ ಕಾಯ್ದುಕೊಂಡಿದ್ದ ಯುವತಿಯೊಬ್ಬಳು, ಪ್ರಿಯಕರನ ಬಳಿ ಆ ಒಂದು ಫೋಟೋ ಕಳಿಸು ಎಂದು ಬೇಡಿಕೊಂಡಿದ್ದಳು. ಆದರೆ, ತಾನು ಕೇಳಿದ ಸಮಯಕ್ಕೆ ಸರಿಯಾಗಿ ಫೋಟೋ ಬರದಿದ್ದ ಕಾರಣಕ್ಕೆ ಮನನೊಂದ ಪ್ರೇಯಸಿ, ರಾತ್ರಿ ಕಳೆದು ಬೆಳಗಾಗುವುದರೊಳಗೆ ಸಾವಿಗೆ ಶರಣಾದ ಘಟನೆ ಗುಜರಾತ್‌ನ ಬನಸ್ಕಾಂತದಲ್ಲಿ ವರದಿಯಾಗಿದೆ..
ಮೃತ ಯುವತಿಯನ್ನು ರಾಧಾ ಠಾಕೂರ್ (27) ಎಂದು ಗುರುತಿಸಲಾಗಿದ್ದು, ಪತಿಯಿಂದ ಬೇರ್ಪಟ್ಟು ಪಾಲನ್‌ಪುರದಲ್ಲಿ ಸಹೋದರಿಯೊಂದಿಗೆ ವಾಸವಾಗಿದ್ದ ರಾಧಾ, ನಗರದಲ್ಲಿ ಒಂದು ಬ್ಯೂಟಿ ಪಾರ್ಲರ್ ನಡೆಸುತ್ತ ಜೀವನ ಸಾಗಿಸುತ್ತಿದ್ದಳು. ಗಂಡನಿಂದ ದೂರವಿದ್ದ ಯುವತಿ, ಭಾನುವಾರ (ಡಿ.15) ಎಂದಿನಂತೆ ಕೆಲಸ ಮುಗಿಸಿ ಮನೆಗೆ ಮರಳಿದ್ದ ರಾಧಾ, ರಾತ್ರಿ ಊಟ ಮುಗಿಸಿ ಮಲಗಿ, ಮರುದಿನ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಫೋನ್ ಪರಿಶೀಲಿಸಿದಾಗ ಕೆಲವು ವಿಡಿಯೋಗಳು ಪತ್ತೆಯಾಗಿದ್ದು. ಪೊಲೀಸರ ಅನುಮಾನವನ್ನು ಹೆಚ್ಚಿಸಿದೆ. ರಾಧಾ ಸಹೋದರಿ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ತನ್ನ ಪ್ರಿಯಕರನಿಗೆ ಸಂಜೆ 7ರೊಳಗೆ ಆ ಫೋಟೋ ಕಳಿಸಬೇಕು ಎಂದು ರಾಧಾ ಒತ್ತಾಯಿಸಿದ್ದಾಳೆ. ಆದರೆ, ಆತನಿಂದ ಮಾತ್ರ ಯಾವುದೇ ಫೋಟೋ, ಸಂದೇಶವೂ ಬಂದಿಲ್ಲ. ಇದಾದ ಬಳಿಕ ‘ನನ್ನನ್ನು ಕ್ಷಮಿಸು, ನಿನ್ನನ್ನು ಕೇಳದೆ ತಪ್ಪು ಮಾಡುತ್ತಿದ್ದೀನಿ ಎಂದು ದುಃಖಿಸಬೇಡ, ಸಂತೋಷವಾಗಿ ಬಾಳು. ಈ ಜೀವನವನ್ನು ಆನಂದಿಸು,ಮದುವೆಯಾಗು. ನೀನು ಸಂತೋಷವಾಗಿದ್ದರೆ ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ’ ಎಂದು ಕೊನೆಯದಾಗಿ ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಮೇಲ್ಕಂಡ ವಿಷಯಗಳನ್ನು ಹೇಳಿ, ಆ ನಂತರ ರಾಧಾ ಸಾವಿಗೆ ಶರಣಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ.