ಸುಳ್ಯ: ಪಟ್ಟಣದ ಶ್ರೀರಾಮ್ ಪೇಟೆಯಲ್ಲಿರುವ ರಾಜೇಶ್ ಬಾರ್‌ನಲ್ಲಿ ಶುಲ್ಲಕ ಕಾರಣಕ್ಕೆ ನಡೆದ ಚೂರಿ ಹಲ್ಲೆಯಲ್ಲಿ ಇಬ್ಬರು ಯುವಕರು ಗಾಯಗೊಂಡ ಘಟನೆ ಶನಿವಾರ ಸಂಜೆ ಸಂಭವಿಸಿದೆ.
ನಿತೇಶ್ ಆರ್.ಕೆ (33) ಹಾಗೂ ಅವರ ಸ್ನೇಹಿತ ಹರೀಶ್ ಮೇಲೆ ಇಬ್ಬರು ಯುವಕರು ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ಪರಿಣಾಮ ಹರೀಶ್ ಅವರ ಎಡ ಕುತ್ತಿಗೆಗೆ ಗಾಯವಾಗಿದ್ದು, ಇಬ್ಬರ ಎಡ ಕೈಗಳಿಗೆ ಗಾಯಗಳಾಗಿವೆ. ಬಾರ್‌ನಲ್ಲಿದ್ದ ಇತರರು ತಕ್ಷಣ ಮಧ್ಯಪ್ರವೇಶಿಸಿ ಹಲ್ಲೆ ತಡೆದು ಗಾಯಾಳುಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. 31/2026 ಕಲಂ 118(1), 109 ರಿ/ವ್ 3(5) BNS 2023 ಅಡಿ ಪ್ರಕರಣ ದಾಖಲಿಸಲಾಗಿದೆ. ಅಜ್ಜಾವರ ಗ್ರಾಮದ ರಾಜೇಶ್ ಬಿ.ಆರ್ (27) ಹಾಗೂ ದಯಾನಂದ್ (30) ಅವರನ್ನು ಬಂಧಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!