ಬಂಟ್ವಾಳ: ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕರಿಮಜಲು ನಿವಾಸಿ ಬಾಬು ಗೌಡ ಅವರ ಪತ್ನಿ ಶ್ರೀಮತಿ ಚಂದ್ರಾವತಿ ಅವರು ಎಲುಬಿನ ಕ್ಯಾನ್ಸರ್ (Bone Cancer) ಕಾಯಿಲೆಯಿಂದ ಬಳಲುತ್ತಿದ್ದು, ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ಹೆಚ್ಚಿನ ಚಿಕಿತ್ಸೆ ಹಾಗೂ ನಿರಂತರ ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚವಾಗುವ ಸಾಧ್ಯತೆಯಿದೆ.ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ಕುಟುಂಬಕ್ಕೆ ಚಿಕಿತ್ಸೆಯ ವೆಚ್ಚ ಭರಿಸುವುದು ದುಸ್ತರವಾಗಿದ್ದು, ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ತಾಯಿಯನ್ನು ಗುಣಮುಖರನ್ನಾಗಿ ಕಾಣಬೇಕೆಂಬ ಮಕ್ಕಳ ಆಶೆಯಿದ್ದರೂ, ಆರ್ಥಿಕ ಅಸಹಾಯಕತೆಯಿಂದ ಚಿಕಿತ್ಸೆಗೆ ಅಗತ್ಯವಿರುವ ಹಣವನ್ನು ಹೊಂದಿಸುವುದು ಸಾಧ್ಯವಾಗುತ್ತಿಲ್ಲ.ಈ ಹಿನ್ನೆಲೆಯಲ್ಲಿ ಮಾನವೀಯ ಮನೋಭಾವ ಹೊಂದಿರುವ ದಾನಿಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ತಮ್ಮ ಕೈಲಾದ ಆರ್ಥಿಕ ನೆರವನ್ನು ನೀಡಿ ಚಿಕಿತ್ಸೆಗೆ ಸಹಕರಿಸುವಂತೆ ಕುಟುಂಬದವರು ಮನವಿ ಮಾಡಿದ್ದಾರೆ. ಸಣ್ಣ ಮೊತ್ತದ ಸಹಾಯವೂ ಚಂದ್ರಾವತಿ ಅವರ ಚಿಕಿತ್ಸೆಗೆ ನೆರವಾಗಲಿದ್ದು, ಜೀವ ಉಳಿಸುವ ಕಾರ್ಯದಲ್ಲಿ ಸಾರ್ವಜನಿಕರು ಕೈಜೋಡಿಸಬೇಕೆಂದು ವಿನಂತಿಸಲಾಗಿದೆ.ನೆರವು ನೀಡಲು ಬ್ಯಾಂಕ್ ಖಾತೆ ವಿವರ:ಖಾತೆದಾರರ ಹೆಸರು: CHETHAN K. (ಚಂದ್ರಾವತಿಯವರ ಪುತ್ರ)ಬ್ಯಾಂಕ್: ಬ್ಯಾಂಕ್ ಆಫ್ ಬರೋಡಾ, ದರ್ಬೆ ಶಾಖೆ, ಪುತ್ತೂರುಖಾತೆ ಸಂಖ್ಯೆ: 70820200001621IFSC: BARB0VJDAPUಮೊಬೈಲ್: 7338509653ಚಂದ್ರಾವತಿ ಅವರ ಚಿಕಿತ್ಸೆಗೆ ಸಹಾಯ ಮಾಡಲು ಇಚ್ಛಿಸುವವರು ಮೇಲಿನ ಬ್ಯಾಂಕ್ ಖಾತೆಗೆ ತಮ್ಮ ಕೈಲಾದ ಆರ್ಥಿಕ ನೆರವನ್ನು ಜಮಾ ಮಾಡುವಂತೆ ಕುಟುಂಬದವರು ಮನವಿ ಮಾಡಿದ್ದಾರೆ..










