ವಿಟ್ಲ: ಶಿಕ್ಷಣ ಇಲಾಖೆ ವತಿಯಿಂದ ಪಿಎಂಶ್ರೀ ವಿಟ್ಲ ಶಾಲೆಯಲ್ಲಿ ನಡೆದ ಜೂಡೋ ಹಾಗೂ ಟೈಕ್ವಾಂಡೋ ಜಿಲ್ಲಾ ಮಟ್ಟದ ಪಂದ್ಯಾಟ ಮತ್ತು ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಕರಾಟೆ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಮಾಧವ ಅಳಿಕೆ ಅವರ ನೇತೃತ್ವದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ಜೂಡೋ: ಸಂತ ರೀಟಾ ಶಾಲೆ ವಿಟ್ಲದ ಮೌಷ್ಮಿ ಶೆಟ್ಟಿ, ಸುವಿಕ್ಷ್ ರೈ, ಮಹಮ್ಮದ್ ರಾಜ್ವಿನ್, ವಿಠಲ ಜೇಸಿಸ್‌ನ ಧನ್ವಿನ್, ಧನ್ವಿ, ಮಾದರಿ ಶಾಲೆ ವಿಟ್ಲದ ಶಿಶೀರ್, ರಿಷಿಕ್ ಆಳ್ವ, ಹೊರೈಜನ್ ಮೇಗಿನಪೇಟೆಯ ಶಾಹಿದ್, ಮೂವಾಝ್, ಹಿತಶ್ರಿ, ಪಡಿಬಾಗಿಲು ಶಾಲೆಯ ಸ್ತುತಿ, ಬಾಲವಿಕಾಸದ ಸಾನಿಧ್ಯ, ಮಾಯ್ ದೇವುಸ್ ಶಾಲೆಯ ಹಂಶಿಕಾ, ಓಜಾಲಾ ಶಾಲೆಯ ಸಂಭ್ರಮ್, ಸತ್ಯ ಸಾಯಿ ಅಳಿಕೆಯ ಶಿಜಾನ್ಯ ಅವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕರಾಟೆ: ಓಜಾಲಾ ಶಾಲೆಯ ಹಂಶಿಕಾ ಹಾಗೂ ಮಾಯ್ ದೇವುಸ್ ಶಾಲೆಯ ಸಾನಿಧ್ಯ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಟೈಕ್ವಾಂಡೋ: ಸತ್ಯ ಸಾಯಿ ಅಳಿಕೆಯ ಪ್ರತಿಕ್ ಶೆಟ್ಟಿ, ವಿಠಲ ಜೇಸಿಸ್‌ನ ಮನಸ್ವಿ, ಸಿರಿ ಸಾಲೆತ್ತೂರಿನ ಐಝಾಝ್, ಬೆಥನಿ ಪುತ್ತೂರಿನ ರಿಯೊನ್ ಲಸ್ರಾದೊ, ಕೊಂಬೆಟ್ಟು ಶಾಲೆಯ ತೃಷ್ಯಾ ಹಾಗೂ ಲಿಪಿಕಾ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಬೆಂಗಳೂರು, ಬಾಗಲಕೋಟೆ ಹಾಗೂ ಯಾದಗಿರಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಪಂದ್ಯಾಟಗಳಲ್ಲಿ ಭಾಗವಹಿಸಲಿದ್ದಾರೆ.
ವಿಶೇಷ ಸಾಧನೆ: ಹಂಶಿಕಾ ಹಾಗೂ ಸಾನಿಧ್ಯ ಅವರು ಒಂದೇ ವರ್ಷದಲ್ಲಿ ಜೂಡೋ ಮತ್ತು ಕರಾಟೆ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ವಿಶೇಷವಾಗಿದೆ.
ವಿದ್ಯಾರ್ಥಿಗಳಿಗೆ ಮಾಧವ ಅಳಿಕೆ ಅವರ ಮಾರ್ಗದರ್ಶನದಲ್ಲಿ ರೋಹಿತ್ ಎಸ್.ಎನ್., ನಿಖಿಲ್ ಕೆ.ಟಿ., ತನುಶ್ರೀ ಡಿ. ಬಂಗೇರ, ಸುಧೀನ್ ಆಚಾರ್ ಹಾಗೂ ಭವಿಶ್ ಸಿಂಹಮೂಲೆ ತರಬೇತಿ ನೀಡುತ್ತಿದ್ದಾರೆ.













