ಪುತ್ತೂರು: ಮನೆಯ ಬಳಕೆಯ ವಸ್ತುಗಳಿಂದ ಅಲಂಕಾರ ಸಾಮಗ್ರಿಗಳವರೆಗೆ ನೂರಾರು ಉತ್ಪನ್ನಗಳನ್ನು ಒಂದೇ ದರದಲ್ಲಿ ನೀಡುವ ‘ನ್ಯೂ ಚೆನ್ನೈ ಶಾಪಿಂಗ್’ ಹಬ್ಬ ಮಾ. 15ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಪುನರಾರಂಭಗೊಂಡಿದೆ.
ಮನೆಯ ಯಜಮಾನಿಯರಿಗೆ ಅಗತ್ಯವಿರುವ ಅಲ್ಯೂಮಿನಿಯಂ ಹಾಗೂ ಸ್ಟೀಲ್ ಅಡುಗೆಪಾತ್ರೆಗಳು, ಯುವತಿಯರು ಮತ್ತು ಮಹಿಳೆಯರ ಬ್ಯಾಗ್‌ಗಳು, ಮಕ್ಕಳ ಶಾಲಾ ಬ್ಯಾಗ್‌ಗಳು, ಆಟಿಕೆಗಳು, ಕಿಟಕಿ–ಬಾಗಿಲ ಪರದೆಗಳು, ಎಲ್ಲಾ ವಯೋಮಾನದವರ ಚಪ್ಪಲಿಗಳು, ಗೋಡೆ ಗಡಿಯಾರಗಳು, ಡೋರ್ ಮ್ಯಾಟ್‌ಗಳು, ವಿವಿಧ ಕಂಪನಿಗಳ ಪ್ಲಾಸ್ಟಿಕ್ ಚೇಯರ್‌ಗಳು ಸೇರಿದಂತೆ ಮನೆ ಮತ್ತು ಕಚೇರಿ ಅಲಂಕಾರಕ್ಕೆ ಬೇಕಾದ ಅನೇಕ ಸಾಮಗ್ರಿಗಳು ಇಲ್ಲಿ ಲಭ್ಯವಿವೆ.
ಹಬ್ಬದ ವಿಶೇಷತೆ ಎಂದರೆ, ಗ್ರಾಹಕರು ಖರೀದಿಸುವ ಪ್ರತಿಯೊಂದು ವಸ್ತುವಿನ ದರ ₹180 ಮಾತ್ರ. ಮೊದಲ ದಿನವೇ ಖರೀದಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸಾಹದಿಂದ ಖರೀದಿ ನಡೆಸಿದರು.
ಚೇಯರ್‌ಗಳ ದರ ಗಮನ ಸೆಳೆದಿದ್ದು, ಒಬ್ಬ ಗ್ರಾಹಕರು ₹180 ದರದಲ್ಲಿ ಒಂದೇ ಬಾರಿ 60 ಚೇಯರ್‌ಗಳನ್ನು ಖರೀದಿಸಿದ್ದಾರೆ. “ಮನೆಯಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಬಾಡಿಗೆ ಚೇಯರ್‌ಗಳ ವೆಚ್ಚ ಹೆಚ್ಚಾಗುತ್ತದೆ. ಇಲ್ಲಿ ಗುಣಮಟ್ಟವೂ ಚೆನ್ನಾಗಿದೆ, ದರವೂ ಕೈಗೆಟುಕುವಂತಿದೆ,” ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ರಮಝಾನ್ ಮತ್ತು ಯುಗಾದಿ ಹಬ್ಬಗಳ ಹಿನ್ನೆಲೆ ಈ ಶಾಪಿಂಗ್ ಹಬ್ಬವನ್ನು ಆಯೋಜಿಸಲಾಗಿದೆ. ಕೆಲ ದಿನಗಳವರೆಗೆ ನಡೆಯಲಿರುವ ಈ ಮೇಳಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕಾರ ನೀಡುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!