ಪುತ್ತೂರು: ನಗರದ ಲಿಟ್ಲ್ ಫ್ಲವರ್ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿಮಂಡಲದ ಪದಗ್ರಹಣ ಹಾಗೂ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವು ಶಾಲಾ ಮುಖ್ಯಶಿಕ್ಷಕಿ ಭಗಿನಿ ಐರಿನ್ ವೇಗಸ್ ಬಿ.ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಬಿ.ಜಿ. ಕನ್ಸ್ಟ್ರಕ್ಷನ್ಸ್‌ನ ಆಡಳಿತ ನಿರ್ದೇಶಕ ಬಿ.ಜಿ. ಜುನೈದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ನಾಯಕತ್ವ ಭಾರತೀಯರ ರಕ್ತದಲ್ಲೇ ಇದೆ. ಭವಿಷ್ಯದ ಉತ್ತಮ ನಾಯಕರನ್ನು ರೂಪಿಸುವ ಕಾರ್ಯ ಶಾಲಾ ಹಂತದಲ್ಲೇ ಆರಂಭವಾಗುವುದು ಸಂತಸದ ಬೆಳವಣಿಗೆ. ಶಾಲೆಯ ವಿದ್ಯಾರ್ಥಿಗಳ ಶಿಸ್ತು ಅನುಕರಣೀಯವಾಗಿದೆ” ಎಂದರು.
ವೇದಿಕೆಯಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿ, ಉದ್ಯಮಿ ಚೇತನ್ ರೈ ಹಾಗೂ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕ ಅಜಿತ್ ರೈ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಭಗಿನಿ ಐರಿನ್ ವೇಗಸ್ ಬಿ.ಎಸ್. ನೂತನ ಮಂತ್ರಿಮಂಡಲದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆ ನಡೆಸಿದರು. ಶಿಕ್ಷಕಿ ಭವ್ಯಶ್ರೀ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
2026-27ನೇ ಸಾಲಿನ ಶಾಲಾ ನಾಯಕಿಯಾಗಿ ವೀಕ್ಷಾ ಡಿ.ಕೆ., ಉಪನಾಯಕನಾಗಿ ನಿಖಿತ್ ಕುಮಾರ್, ದ್ವಿತೀಯ ಉಪನಾಯಕಿಯರಾಗಿ ಶ್ರುಜ್ಞ ಅಳ್ವ ಹಾಗೂ ಆಶ್ವಿ ಕೃಷ್ಣ ಡಿ. ಆಯ್ಕೆಯಾದರು. ವಿದ್ಯಾ ಮಂತ್ರಿಗಳಾಗಿ ಶಿಯಾ ಕರ್ಕೇರ ಹಾಗೂ ಹಾತಿಂ ರಹಮಾನ್, ಶುಚಿತ್ವ ಮಂತ್ರಿಗಳಾಗಿ ಅನ್ವಿತ್ ಆಚಾರ್ಯ ಹಾಗೂ ಮಹಮ್ಮದ್ ನಿಹಾಲ್, ನೀರಾವರಿ ಮಂತ್ರಿಗಳಾಗಿ ಶಂಶಾಕ್ ಬಿ.ಕೆ. ಹಾಗೂ ರೋಹಿತ್, ಕ್ರೀಡಾ ಮಂತ್ರಿಗಳಾಗಿ ಉಮ್ಮುನಿಧಾ ಹಾಗೂ ಯಶಸ್ವಿ ಪಿ.ಕೆ., ತೋಟಗಾರಿಕಾ ಮಂತ್ರಿಗಳಾಗಿ ಸುಜನ್ ಹಾಗೂ ಗಗನ್ ದೀಪ್, ಸಾಂಸ್ಕೃತಿಕ ಮಂತ್ರಿಗಳಾಗಿ ಮೋಕ್ಷಿತಾ ಕೆ.ಡಿ. ಹಾಗೂ ಐಶ್ವರ್ಯ, ಆಹಾರ ಮಂತ್ರಿಗಳಾಗಿ ಅರುಶ್ ಹಾಗೂ ಮೊಹಮ್ಮದ್ ಮಾಝೀನ್, ಆರೋಗ್ಯ ಮಂತ್ರಿಗಳಾಗಿ ಫಾತಿಮತ್ ಹಾದಿಯ ಹಾಗೂ ಸಾತ್ವಿಕ್ ಮಡ್ಯಂಗಳ, ರಕ್ಷಣಾ ಮಂತ್ರಿಗಳಾಗಿ ಅಕ್ಷಯ್ ಗೌಡ ಹಾಗೂ ಶಮಿತ್ ಪ್ರಮಾಣವಚನ ಸ್ವೀಕರಿಸಿದರು.
ಹರ್ಷಿಕಾ ವಿರೋಧ ಪಕ್ಷದ ನಾಯಕಿಯಾಗಿ, ಜೊವಿಯಲ್ ಡಿಕುನ್ಹಾ ವಿರೋಧ ಪಕ್ಷದ ಉಪನಾಯಕನಾಗಿ ಹಾಗೂ ದೃತಿ ರೈ ಸಭಾಪತಿಯಾಗಿ ಆಯ್ಕೆಯಾದರು.
ಮಂತ್ರಿಮಂಡಲದ ಜವಾಬ್ದಾರಿ ನಿರ್ವಹಕಿ ವಿಲ್ಮಾ ಫೆರ್ನಾಂಡಿಸ್ ಹಾಗೂ ಶಿಕ್ಷಕಿಯರಾದ ಭಗಿನಿ ಪ್ರಿಫಿಲ್ಡ, ಪ್ರಮೀಳಾ ಪ್ರೀತಿ, ನಯನ, ಸಾತ್ವಿಕ ಮತ್ತು ಶಿವಪ್ರಿಯ ಕಾರ್ಯಕ್ರಮದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಕಾರ್ಯಕ್ರಮ ಶಿಸ್ತುಬದ್ಧವಾಗಿ ನಡೆಯಿತು.







