ಪುತ್ತೂರು: ದೇಶದ ಪ್ರಮುಖ ವಜ್ರಾಭರಣ ಬ್ರ್ಯಾಂಡ್‌ಗಳಲ್ಲಿ ಒಂದಾದ ಕಿಸ್ನಾ ಡೈಮಂಡ್‌ನ ಸಂಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಘನಶ್ಯಾಮ್ ದೋಲಕಿಯಾ ಅವರು ಪುತ್ತೂರಿನ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಶೋರೂಂಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅವರು ಶೋರೂಂನ ವಿವಿಧ ವಿಭಾಗಗಳನ್ನು ವೀಕ್ಷಿಸಿ, ಸಂಸ್ಥೆಯ ಕಾರ್ಯವೈಖರಿ ಹಾಗೂ ಗ್ರಾಹಕ ಸೇವೆಯ ಬಗ್ಗೆ ಮಾಹಿತಿ ಪಡೆದರು.
ಭೇಟಿಯ ವೇಳೆ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್‌ನ ಕೇಶವ ಪ್ರಸಾದ್ ಮುಳಿಯ ಹಾಗೂ ಕೃಷ್ಣರಾಯಣ ಮುಳಿಯ ಉಪಸ್ಥಿತರಿದ್ದು, ಘನಶ್ಯಾಮ್ ದೋಲಕಿಯಾ ಅವರನ್ನು ಸ್ವಾಗತಿಸಿದರು. ಉದ್ಯಮದ ಬೆಳವಣಿಗೆ, ವಜ್ರಾಭರಣ ಕ್ಷೇತ್ರದ ಹೊಸ ಪ್ರವೃತ್ತಿಗಳು ಹಾಗೂ ಗ್ರಾಹಕರ ನಿರೀಕ್ಷೆಗಳ ಕುರಿತು ಪರಸ್ಪರ ಚರ್ಚೆ ನಡೆಸಲಾಯಿತು.






