ಸಾ ನಿಯಾ ಮಿರ್ಜಾ ಹಾಗೂ ಮೊಹಮ್ಮದ್ ಶಮಿ ಇಬ್ಬರೂ ಭಾರತದ ಹೆಮ್ಮೆಯ ಕ್ರೀಡಾ ಪಟುಗಳು. ಕ್ರೀಡೆಯಲ್ಲಿ ಇವರಿಗೆ ಸಿಕ್ಕ ಯಶಸ್ಸು ವೈಯಕ್ತಿಕ ಜೀವನದಲ್ಲಿ ಸಿಗಲಿಲ್ಲ. ಇಬ್ಬರ ಪರ್ಸನಲ್ ಲೈಫ್‌ ಕೂಡ ಬೀದಿಗೆ ಬಂದಿದೆ. ಹೀಗಾಗಿ ಕಳೆದ ಕೆಲವು ತಿಂಗಳಿನಿಂದ ಇಬ್ಬರ ವೈಯಕ್ತಿಕ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿ ಬಿಟ್ಟಿವೆ

ಭಾರತದ ಕ್ರಿಕೆಟ್ ತಂಡದ ಬೌಲರ್ ಮೊಹಮ್ಮದ್ ಶಮಿ ಹಾಗೂ ಅವರ ಮಾಜಿ ಪತ್ನಿಯ ಕಿತ್ತಾಟ ಸಾರ್ವಜನಿಕವಾಗಿ ನಡೆಯುತ್ತಲೇ ಇತ್ತು. ಆದರೆ, ಇತ್ತೀಚೆಗೆ ಸಾನಿಯಾ ಮಿರ್ಜಾ ವೈವಾಹಿಕ ಜೀವನ ಕೂಡ ಮುರಿದು ಬಿದ್ದಾಗ ಕ್ರೀಡಾ ಲೋಕವೇ ಶಾಕ್ ಆಗಿತ್ತು. ಆದರೆ, ಸೋಶಿಯಲ್ ಮೀಡಿಯಾ ಇಬ್ಬರಿಗೂ ಸಮಾಧಾನದ ಹೇಳುತ್ತಿದ್ದವರು ದಿಢೀರನೇ ಬದಲಾಗಿಬಿಟ್ಟಿದ್ದರು.

ಬಹಳ ದಿನಗಳಿಂದ ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಜೊತೆ ಕ್ರಿಕೆಟರ್ ಮೊಹಮ್ಮದ್ ಶಮಿಯ ಹೆಸರನ್ನು ತಳುಕು ಹಾಕಲಾಗಿದೆ. ಇಬ್ಬರೂ ಶೀಘ್ರದಲ್ಲೇ ಮದುವೆ ಆಗುತ್ತಾರೆ ಅನ್ನೋ ಸುದ್ದಿ ಕೆಲವು ದಿನಗಳು ಸದ್ದು ಮಾಡಿದ್ದವು. ಅದಕ್ಕೆ ತಕ್ಕಂತೆ ಕೆಲವು ದಿನಗಳಿಂದ ಇಬ್ಬರು ಜೊತೆಯಲ್ಲಿರುವ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅದರಲ್ಲೂ ಸಾನಿಯಾ ಮಿರ್ಜಾ ಹಾಗೂ ಮೊಹಮ್ಮದ್ ಶಮಿ ಕಾಶ್ಮೀರದಲ್ಲಿ ಇದ್ದಾರಾ? ಎರಡು ಮದುವೆಗೆ ಸಜ್ಜಾಗಿದ್ದಾರಾ? ಈ ಫೋಟೊಗಳು ವೈರಲ್ ಆಗುತ್ತಿರುವುದೇಕೆ? ತಿಳಿಯಲು ಮುಂದೆ ಓದಿ.

ಸಾನಿಯಾ ಮಿರ್ಜಾ ಹಾಗೂ ಮೊಹಮ್ಮದ್ ಶಮಿ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿ ಅವರ ಫ್ಯಾನ್ಸ್ ಶಾಕ್ ಆಗಿದ್ದಾರೆ. ಈ ಫೋಟೊಗಳನ್ನು ನೋಡಿದರೆ, ಶಮಿ ಹಾಗೂ ಸಾನಿಯಾ ಮಿರ್ಜಾ ಇಬ್ಬರೂ ಒಬ್ಬರನ್ನೊಬ್ಬರು ಆಳವಾಗಿ ಪ್ರೀತಿಸುತ್ತಿದ್ದಾರೆ ಅಂತ ತೋರುತ್ತದೆ. ಕಾಶ್ಮೀರದಲ್ಲಿ ಈ ಜೋಡಿ 2ನೇ ಮದುವೆಗೆ ಏನಾದರೂ ಸಜ್ಜಾದರೇ ಎಂಬ ಅನುಮಾನ ಕೂಡ ಮೂಡುತ್ತಿದೆ. ಆದರೆ, ಈ ಫೋಟೊಗಳ ಅಸಲಿಯತ್ತು ಬೇರೆನೇ ಇದೆ.

ಭಾರತೀಯ ಕ್ರೀಡಾ ಲೋಕದ ಈ ದಿಗ್ಗಜರು ಶೀಘ್ರದಲ್ಲೇ ಮದುವೆ ಆಗುತ್ತಾರೆ ಅಂತ ಹಲವು ದಿನಗಳಿಂದ ಬಿಂಬಿಸಲಾಗುತ್ತಿದೆ. ಅದಕ್ಕೆ ಪೂರಕ ಎನ್ನುವಂತೆ ಇವರಿಬ್ಬರೂ ಈಜುಕೊಳದಲ್ಲಿ ಒಟ್ಟಿಗೆ ಸ್ನಾನ ಮಾಡುತ್ತಿರುವ ಫೋಟೊಗಳನ್ನು ಶೇರ್ ಮಾಡಲಾಗಿದೆ. ಇತ್ತೀಚೆಗೆ ಇಬ್ಬರೂ ಕಾಶ್ಮೀರದಂತಹ ಸುಂದರವಾದ ತಾಣಗಳಲ್ಲಿ, ಹಿಮವಿರುವ ಸ್ಥಳಗಳಲ್ಲಿ ಒಟ್ಟಿಗೆ ಇರುವುದು ಕಂಡು ಬಂದಿದೆ. ವಿಶೇಷ ಅಂದರೆ, ಇವರಿಬ್ಬರ ಫೋಟೊಗಳು ಅಷ್ಟೇ ವೇಗವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.

ಆದರೆ, ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ಇಬ್ಬರ ಈ ಫೋಟೊಗಳು ಸಂಪೂರ್ಣ ನಕಲಿ. ಯಾಕಂದ್ರೆ ಈ ಫೋಟೊಗಳನ್ನು ಎಐ (AI) ತಂತ್ರಜ್ಞಾನವನ್ನು ಬಳಸಿ ಸೃಷ್ಟಿಸಲಾಗಿದೆ. ಅವುಗಳನ್ನು ಯಾರೋ ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಸಿನಿಮಾಗಳು ಸಂಪೂರ್ಣವಾಗಿ ನಕಲಿ. ಆದರೆ, ಈ ಫೋಟೊಗಳು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಹೈದರಾಬಾದ್ ಮೂಲದ ಸಾನಿಯಾ ಮಿರ್ಜಾ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿದ್ದರು. ಕೆಲವು ವರ್ಷಗಳ ವೈವಾಹಿಕ ಜೀವನ ನಡೆಸಿದ ಬಳಿಕ ಇಬ್ಬರೂ ವಿಚ್ಛೇದನ ಪಡೆಕೊಂಡಿದ್ದಾರೆ. ಇದು ಶೋಯೆಬ್ ಮಲಿಕ್‌ಗೆ ಕೂಡ ಎರಡನೇ ವಿವಾಹವಾಗಿತ್ತು. ಇತ್ತ ಮೊಹಮ್ಮದ್ ಶಮಿ ಕೂಡ ಹಸಿನ್ ಜಹಾನ್ ಅವರಿಂದ ದೂರ ಉಳಿದಿದ್ದು, ವೈವಾಹಿಕ ಜೀವನ ಮುರಿದು ಬಿದ್ದಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!