ಪುತ್ತೂರು; ಸಹಕಾರ ಸಂಘಗಳು ಆರ್ಥಿಕ ಕ್ಷೇತ್ರಕ್ಕೆ ಮಹತ್ತರ ಕೊಡುಗೆ. ಜನಸಾಮಾನ್ಯದ ಬದುಕಿನಲ್ಲಿ ಆರ್ಥಿಕ ಶಕ್ತಿ ತುಂಬಲು ಸಹಕಾರ ಸಂಘಗಳು ಇನ್ನಿಲ್ಲದಂತೆ ದುಡಿಯುತ್ತಿವೆ. ಇಡೀ ದೇಶಕ್ಕೆ ಸಹಕಾರ ಸಂಘಗಳನ್ನು ಹೇಗೆ ನಡೆಸಬೇಕು ಎಂದು ತೋರಿಸಿಕೊಟ್ಟ ಹಿರಿಮೆ ದಕ ಜಿಲ್ಲೆಯದ್ದಾಗಿದೆ. ಸಹಕಾರ ಮತ್ತು ಬ್ಯಾಂಕಿAಗ್ ಕೇತ್ರಗಳು ತುಳುನಾಡಿನ ಜನತೆಯ ರಕ್ತದಲ್ಲಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಅಭಿಪ್ರಾಯ ಪಟ್ಟರು. 
ಸೋಮವಾರ ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಹಾಗೂ ನೂತನ ಕಟ್ಟಡ ಲೋಕಾರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಸಹಕಾರ ಕ್ಷೇತ್ರ ಮತ್ತಷ್ಟು ವ್ಯವಸ್ಥಿತವಾಗಿ ನಡೆಯಲು ಮಹತ್ತರವಾದ ಕೊಡುಗೆ ನೀಡಿದ್ದಾರೆ. ಜಿಲ್ಲೆಯಲ್ಲಿ ಸಹಕಾರ ಸಂಘಗಳು ಅತ್ಯಂತ ಶಿಸ್ತುಬದ್ಧ ರೀತಿಯಲ್ಲಿ ನಡೆಯುತ್ತಿದ್ದು, ಇದು ದೇಶದ ಸಹಕಾರ ಸಂಘಗಳಿಗೆ ಮಾದರಿಯಾಗಿವೆ. ಇಂದಿಗೂ ಕುಟುಂಬ ಪದ್ಧತಿಯನ್ನು ಜೀವಂತವಾಗಿರಿಸಿ ಕೊಂಡಿರುವ ದಕ ಜಿಲ್ಲೆಯಲ್ಲಿ ಸಹಕಾರ ಎಂಬುವುದು ಇಲ್ಲಿನ ಜನತೆಯ ಸಂಸ್ಕೃತಿಯಾಗಿ ಪರಿವರ್ತಿತವಾಗಿದೆ. ಇಲ್ಲಿ ನನಗೆ ಸಂಸದನಾಗಿ ಅವಕಾಶ ಸಿಕ್ಕಿದೆ. ಜಿಲ್ಲೆಯ ಬೆಳವಣಿಗೆಗೆ ವಿಫುಲವಾದ ಅವಕಾಶಗಳಿವೆ. ಜನತೆಯ ಅಪೇಕ್ಷೆ-ಆಕಾಂಕ್ಷೆಗಳಿಗೆ ಸ್ಪೂರ್ತಿ ತುಂಬುವ ನಿಟ್ಟಿನಲ್ಲಿ ಪ್ರಾಮಾಣಿಕ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಆ ಮೂಲಕ ಸಮರ್ಥ ಭಾರತ ನಿರ್ಮಾಣದ ಕನಸು ಈಡೇರುವಂತಾಗಬೇಕಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕಾಣಿಯೂರು ರಾಮತೀರ್ಥ ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅವರು ಸಹಕಾರ ಎಂಬುವುದು ಎಲ್ಲರಿಂದ ಎಲ್ಲರಿಗಾಗಿ ನಡೆಯುವ ಕಾರ್ಯಕ್ರಮ. ಇದು ಪ್ರತಿಯೊಬ್ಬರಿಗೂ ಸ್ಪೂರ್ತಿ ಕೊಡುವ ಕ್ಷೇತ್ರವಾಗಿದೆ. ಮನೆ ಮತ್ತು ಮನದಲ್ಲಿ ಸಹಕಾರ ಇದ್ದಾಗ ಮಾತ್ರ ನಾಡು-ದೇಶ ಸುಸ್ಥಿರವಾಗುತ್ತದೆ. ಕೃಷಿಕರು ಮತ್ತು ಸೈನಿಕರು ಸದಾ ನಮ್ಮ ಸ್ಮರಣೆಯಲ್ಲಿರಬೇಕು. ಸೈನಿಕರು ದೇಶ ಕಾಪಾಡಿದರೆ ಕೃಷಿಕರು ದೇಶದ ಜತೆಗೆ ದೇಹವನ್ನೂ ಕಾಪಾಡುತ್ತಾರೆ. ಈ ನಿಟ್ಟಿನಲ್ಲಿ ಕೃಷಿಕರ ಬೆಂಗಾವಲಾಗಿ ನಿಂತಿರುವ ಸಹಕಾರ ಕ್ಷೇತ್ರ ಜಿಲ್ಲೆಯ ಹೆಮ್ಮೆಯಾಗಿ ಜನತೆಯ ಬದುಕು ಕಟ್ಟುವಲ್ಲಿ ಸಮರ್ಥನೀಯವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.


ಸದಸ್ಯರಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡುವ ಆಧುನಿಕ ತಂತ್ರಜ್ಞಾನ ಉದ್ಘಾಟಿಸಿದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಎಸ್.ಬಿ.ಜಯರಾಮ ರೈ ಬಳಜ್ಜ ಅವರು ಮಾತನಾಡಿ, ದೇಶಕ್ಕೆ ಸಹಕಾರ ಕ್ಷೇತ್ರವನ್ನು ಕೊಟ್ಟಿರುವುದು ಜಿಲ್ಲೆಯ ಜನತೆ. ಅತ್ಯಂತ ಸುವ್ಯವಸ್ಥಿತ ರೀತಿಯಲ್ಲಿ ಈ ಕ್ಷೇತ್ರವನ್ನು ಕಟ್ಟಿಕೊಟ್ಟ ಹಿರಿಮೆ ಇಲ್ಲಿಯ ಸಹಕಾರಿಗಳದ್ದಾಗಿದೆ. ಹಾಗಾಗಿ ಸಹಕಾರ ಕ್ಷೇತ್ರದ ಬೆಳವಣಿಗೆಯಲ್ಲಿ ಇಲ್ಲಿಯ ಜನತೆಯ ಪಾತ್ರ ಅದ್ವೀತಿಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಕೆ.ಎಸ್.ಉದನಡ್ಕ ವಹಿಸಿದ್ದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಸಚಿವ ಎಸ್.ಅಂಗಾರ, ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು, ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್ ಹೆಚ್.ಎಸ್, ಕಾಣಿಯೂರು ಗ್ರಾಪಂ ಅಧ್ಯಕ್ಷ ವಿಶ್ವನಾಥ ಕೊಪ್ಪ, ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಚಾರ್ವಾಕ ಸೊಸೈಟಿಯ ಉಪಾಧ್ಯಕ್ಷ ಬಾಲಕೃಷ್ಣ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಪಿ, ನ್ಯಾಯವಾದಿ ಮೋಹನ್ ಗೌಡ ಇಡ್ಯಡ್ಕ, ಸಂಘದ ನಿರ್ದೇಶಕರಾದ ಅನಂತಕುಮಾರ್ ಬೈಲಂಗಡಿ, ಪರಮೇಶ್ವರ ಅನಿಲ, ಲೊಕೇಶ್ ಗೌಡ ಆತಾಜೆ, ಶೀಲಾವತಿ ಮುಗರಂಜ, ವಿಶ್ವನಾಥ ಕೂಡಿಗೆ, ವೀಣಾ ಅಂಬುಲ, ರಮೇಶ್ ಉಪ್ಪಡ್ಕ, ದಿವಾಕರ ಮರಕ್ಕಡ, ಸುಂದರ ಗೌಡ ದೇವಸ್ಯ, ರತ್ನಾವತಿ ಮುದ್ವ ವಸಂತ್ ಎಚ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸ್ಥಾಪಕ ಸದಸ್ಯರು, ಮಾಜಿ ಅಧ್ಯಕ್ಷರು, ಸ್ಥಳದಾನಿಗಳು, ನಿವೃತ್ತ ಸಿಬಂದಿಗಳು ಹಾಗೂ ರಾಷ್ಟçಮಟ್ಟದ ಸಾಧಕರಿಗೆ ಸನ್ಮಾನ-ಗೌರವಾರ್ಪಣೆ ನಡೆಯಿತು. 

Leave a Reply

Your email address will not be published. Required fields are marked *

Join WhatsApp Group
error: Content is protected !!