
ಸಹಕಾರಿ ರಂಗಕ್ಕೆ ದೇಶಕ್ಕೆ ಮಾದರಿ ಜಿಲ್ಲೆ ದಕ್ಷಿಣ ಕನ್ನಡ. ಇದು ಮುಂದುವರಿದ ಜಿಲ್ಲೆಯಾಗುವುದಕ್ಕೆ ಜಿಲ್ಲೆಯಲ್ಲಿ ಶತಮಾನಗಳ ಹಿಂದೆ ನಡೆದ ಸಹಕಾರಿ ಚಳುವಳಿ ಮೂಲ ಪ್ರೇರಣೆ” ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಚಾರ್ವಾಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಶತಮಾನೋತ್ಸವ ಕಾರ್ಯಕ್ರಮ ಮತ್ತು ಮೂರು ದಿನದ ಕೃಷಿ ಮೇಳದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಸಂಘವು ರೈತರ ಬದುಕಿಗೆ ಅರ್ಥಿಕ ಚೈತನ್ಯವನ್ನು ಕೊಡುವ ಕಾರ್ಯವನ್ನು ಮಾಡುತ್ತಿದೆ. ಇದು ಕೃಷಿಯ ಮೂಲಕ ಬದುಕು ಸಾಗಿಸಲು ಸಾಧ್ಯ ಎಂದು ತೋರಿಸಿ ಕೊಟ್ಟಿತ್ತು. ರೈತರ ಜತೆಗೆ ಕೂಲಿ ಕಾರ್ಮಿಕರಿಗೂ ಆರ್ಥಿಕ ಚಟುವಟಿಕೆ ನಡೆಸಲು ಸಹಕರಿಸುವ ಮೂಲಕ ಈ ಬ್ಯಾಂಕ್ ಈ ಗ್ರಾಮದ ಜನರ ಬದುಕನ್ನು ಬೆಳಗಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಈ ಸಂಸ್ಥೆ ಚಾರ್ವಾಕ ಹಾಗೂ ಸುತ್ತ ಮುತ್ತಲಿನ ಗ್ರಾಮದಲ್ಲಿ ಕೃಷಿಯ ಮೂಲಕ ಬದುಕು ಸಾಗಿಸುವವರ ಆಧಾರ ಸ್ಥಂಭವಾಗಿದೆ ಎಂದರು.
ಸಂಘಕ್ಕೆ ಆರ್ಥಿಕವಾಗಿ ಹೊರೆಯಾಗದಂತೆ ಹೊರಗಿನ ದಾನಿಗಳಿಂದ ಹಣವನ್ನು ಸಂಗ್ರಹಿಸಿ ಜಾಗ ಖರೀದಿ ಸಭಾಭವನ ನಿರ್ಮಾಣ ಹಾಗೂ ಶತಮಾನೋತ್ಸವದ ಕಾರ್ಯಕ್ರಮ ಮಾಡಿದ ಗಣೇಶ್ ಉದನಡ್ಕ ನೇತ್ರತ್ವದ ತಂಡದ ಕಾರ್ಯ ಜಿಲ್ಲೆಗೆ ಮಾದರಿ. ಕೃಷಿ ಮೇಳ ಆಯೋಜಿಸುವ ಮೂಲಕ ಕೃಷಿಕರಿಗೆ ಬೇಕಾದ ಮಾಹಿತಿ ಹಾಗೂ ಉಪಕರಣಗಳನ್ನು ಒದಗಿಸುವ ಅತ್ಯಾಪೂರ್ವ ಕಾರ್ಯಕ್ರಮ ಈ ತಂಡ ಮಾಡಿದೆ. ಜಿಲ್ಲೆಯ ಮಾದರಿ ಸಹಕಾರಿ ಸಂಘವಾಗಿ ಬೆಳೆಯಲಿ ಎಂದು ಮಾಜಿ ಸಂಸದ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶುಭ ಹಾರೈಸಿದರು.
ಕುಶಾಲಪ್ಪ ಗೌಡ ಪೂವಾಜೆ ಮಾತನಾಡಿ “ಪ್ರಸ್ತುತ ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕ್ ಗಳು ಔನ್ನತ್ಯದತ್ತ ಸಾಗುತ್ತಿದ್ದು, ರಾಷ್ಟ್ರೀಕೃತ ಬ್ಯಾಂಕ್ ಗಳು ಕೆಳಮುಖದತ್ತ ಸಾಗುತ್ತಿದೆ. ಸಹಕಾರಿ ಬ್ಯಾಂಕ್ಗಳು ರೈತನಿಗೆ ಸಂಕಷ್ಟ ಎದುರಾದಾಗ ಆತನ ಬೆನ್ನಿಗೆ ನಿಂತಿರುವುದೆ ಇದಕ್ಕೆ ಕಾರಣ. ಸಹಕಾರಿ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಪಾರದರ್ಶಕವಾಗಿ ಇದ್ದರೇ ಆಗ ರೈತರಿಗೆ ಆ ಬ್ಯಾಂಕಿನ ಮೇಲೆ ವಿಶ್ವಾಸ ಮೂಡಿದೆ. ಚಾರ್ವಕದಲ್ಲಿ ಇದು ಸಾಧ್ಯವಾಗಿದೆ ಎಂದರು.
ಕೃಷಿ ಮೇಳ ಉದ್ಘಾಟನೆ :
ಮೂರು ದಿನಗಳ ಕಾಲ (ಜ 11, 12 ಮತ್ತು 13) ನಡೆಯುವ ಕೃಷಿ ಮೇಳವನ್ನು ಮೇದಪ್ಪ ಗೌಡ ನಾವೂರು ಅವರು ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದರು.
ಸನ್ಮಾನ: ಸಂಘದ ಮಾಜಿ ಉಪಾಧ್ಯಕ್ಷರುಗಳಾದ
ಕೃಷ್ಣಪ್ಪ ಗೌಡ ದೋಳಾಡಿ, ಎನ್ ಆನಂದ ಗೌಡ ಕಾಣಿಯೂರು, ಅಚ್ಯುತ ಕುಮಾರ್ ಕಾಣಿಯೂರು, ಕೆ ಅಣ್ಣಿ ಪೂಜಾರಿ ಕಳೆಂಜೋಡಿ, ಕೆ ಎನ್ ಪದ್ಮಯ್ಯ ಗೌಡ ಕಾಣಿಯೂರು, ಕೇಶವ ಗೌಡ ಕರಂದ್ಲಾಜೆ ಬಿ ರಾಮಣ್ಣ ಗೌಡ ಪೈಕ, ಕೆ ಅನಂತರಾಮ ಉಪಾಧ್ಯಯ, ಎಂ ವೆಂಕಟರಮಣ ಗೌಡ ದೋಳಾಡಿ ಪುಟ್ಟಣ್ಣ ಗೌಡ ಪೈಕ, ಸದಾನಂದ ರೈ,ವಿಜಯ ಕುಮಾರ್ ಸೊರಕೆ, ನರೇಂದ್ರ ಗೌಡ ಅಭಿಕಾರ್ ಅವರ ಶ್ರೀಮತಿ, ಸೀತಾರಾಮ ಗೌಡ ಖಂಡಿಗ ಹಾಗೂ ಮುರಳಿಧರ ಪುಣ್ಯತ್ತಾರು ಸಭೆಯಲ್ಲಿ ಸನ್ಮಾನಿಸಲಾಯಿತು.
ನಾಟಿ ವೈದರಿಗೆ ಸುನ:
ಶಾಂತಮ್ಮ ಕೊಪ್ಪ, ಪುಷ್ಪಲತಾ ಗುಜರ್ಮೆ, ಗಿರೀಜ ಎಣ್ಣೂರು, ಪದ್ಮಾವತಿ ಕೊಲ್ಯ, ಪೂವಕ್ಕ ಎಳುವೆ, ಮೋನಕ್ಕ ಉದಲಡ್ಡ ಹಾಗೂ ದಿನೇಶ್ ಮಾಳ ಮಾಡಲಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ:
ಪುನಿತ ಮುವ್ವ, ಪ್ರಿಯಾ ಅಂಬುಲ, ಸಿಂಚನಾ ಅಂಬುಲ, ಧ್ರುವಿ ಬಾಕಿಲ, ತೃಷಾ ಕೊಡಂದೂರು, ಡಾ| ಕಿರಣ್ ಮುಕರಂಜ, ಉತ್ತಮ್ ಜಿ, ಶೀನಪ್ಪ ಪರವ, ಹೇಮಂತ್ ಮರ್ಲಾನಿ,
ಗೌರವ:
ಖೋ ಖೋ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಚಿನ್ನದ ಪದಕ ಸಹಿತ ಹಲವು ಪದಕಗಳನ್ನು ಗೆದ್ದಿರುವ ದೀಕ್ಷಾ ಕುಕ್ಕುನಡ್ಕ. ಸಾಮಾಜಿಕ, ಧಾರ್ಮಿಕ ರಾಜಕೀಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ರಾಕೇಶ್ ರೈ ಕೆಡೆಂಜಿಯವರನ್ನು ಗೌರವಿಸಲಾಯಿತು.
ನಿರ್ದೇಶಕರು ಎಸ್ ಸಿಡಿಸಿಸಿ ಬ್ಯಾಂಕ್ ಮಂಗಳೂರಿನ ಮನ್ಮಥ ಎಸ್ ಎನ್ ಹಾಗೂ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರುಗಳಾದ ಆನಂದ ಗೌಡ ಮತ್ತು ಧರ್ಮೇಂದ್ರ ಕಟ್ಟತ್ತಾರು, ಕೃಷ್ಣ ಕುಮಾರ್ ಮಡ್ತಿಲ, ಪ್ರದೀಪ್ ಆರ್ ಗೌಡ ಅರುವಗುತ್ತು, ಧನಂಜಯ ಕೆನಾಜೆ, ಯುಪಿ ರಾಮಕೃಷ್ಣ ಗೌಡ, ಶಿವಪ್ರಸಾದ್ ಇ. ಮೇದಪ್ಪ ಗೌಡ ನಾವೂರು ಮಹೇಶ್ ಕೆ ಸವಣೂರು, ರೋಹಿತ್ ಗೌಡ ಅನಿಲ, ತಾರನಾಥ ಕಾಯಾರ್ಗ ಉಪಸ್ಥಿತರಿದ್ದರು.
ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಗಣೇಶ್ ಕೆ ಎಸ್ ಉದನಡ್ಕ ಸ್ವಾಗತಿಸಿ ಸೇವಾ ಸಹಕಾರಿ ಸಂಘ ಬೆಳೆದು ಬಂದ ಹಾದಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಶೋಕ್ ಕುಮಾರ್ ಪಿ ಧನ್ಯವಾದ ಆರ್ಪಿಸಿದರು. ವಸಂತ ಎಸ್.ಡಿ ಕಾರ್ಯಕ್ರಮ ನಿರೂಪಿಸಿದರು. ನಿನಾದ, ಧನ್ವಿತ, ಚಾರ್ವಿ ಪ್ರಾರ್ಥಿಸಿದರು.






