
ಇತ್ತೀಚಿನ ದಿನಗಳಲ್ಲಿ ಸಾವು ಯಾವಾಗ- ಹೇಗೆ ಬಂದೆರಗುತ್ತದೆ ಎಂಬುದು ಹೇಳಲು ಅಸಾಧ್ಯ. ಇವತ್ತು ಚೆನ್ನಾಗಿದ್ದವ ನಾಳೆ ಶವವಾಗುತ್ತಾನೆ. ಅಂತೆಯೇ ಇಲ್ಲೊಂದು ಘಟನೆಯಲ್ಲಿ ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ ಭಾರೀ ಗಾತ್ರದ ಟ್ರಕ್, ಬೈಕ್ ಮೇಲೆ ಬಿದ್ದ ಪರಿಣಾಮ ಸವಾರರಿಬ್ಬರು ಸಾವನ್ನಪ್ಪಿದ್ದಾರೆ.ಈ ಘಟನೆ ನಿನ್ನೆ ರಾಜಸ್ಥಾನದ ಧೋಲ್ಟುರ ಜಿಲ್ಲೆಯಲ್ಲಿ ನಡೆದಿದೆ.
ಟ್ರಕ್ ಓವರ್ ಲೋಡ್ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಲೋಡ್ ಆಗಿದ್ದ ಟ್ರಕ್ ಧೋಲ್ಟುರ್ ರಸ್ತೆಯಲ್ಲಿ ಸಂಚರಿಸುವಾಗ ಚಾಲಕನ ನಿಯಂತ್ರಣ ತಪ್ಪಿದೆ. ಬಳಿಕ ರಸ್ತೆ ಪೂರ್ತಿ ವಾಲಾಡುತ್ತಾ ಮುಂದೆ ಸಾಗುತ್ತಿದ್ದ ಬೈಕ್‌ನ ಮೇಲೆ ಪಲ್ಟಿಯಾಗಿದೆ. ಬೈಕಿನ ಪಲ್ಟಿಯಾಗುತ್ತಿದ್ದಂತೆಯೇ ಇಬ್ಬರು ಸವಾರರು ಅಪ್ಪಚ್ಚಿಯಾಗಿದ್ದಾರೆ.
ಘಟನೆಯ ಬಳಿಕ ಹೈಡ್ರಾ ಕ್ರೇನ್ ಬಳಸಿಕೊಂಡು ಟ್ರಕ್ ನ್ನು ಮೇಲೆತ್ತಲಾಗಿದ್ದು, ಸವಾರರಿಬ್ಬರನ್ನು ಹೊರತೆಗೆಯಲಾಗಿದೆ. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.
