ಯೂಟ್ಯೂಬ್ ನೋಡಿ ಡಯಟ್ ಮಾಡಿ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಯೊಬ್ಬಳು ಸಾವನ್ನೊಪ್ಪಿದ್ದಾಳೆ.

ಕಣ್ಣೂರಿನ ಕೂತುಪರಂಬದ ಮೇರುವಾಂಬೈ ಆರೋಗ್ಯ ಕೇಂದ್ರದ ಬಳಿಯ ಕೈತೇರಿಕಂಡಿ ನಿವಾಸಿ 18 ವರ್ಷದ ಎಂ. ಶ್ರೀನಂದ ಮೃತ ಯುವತಿ.

ತಲಶ್ಶೇರಿ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಶನಿವಾರ ಕೊನೆಯುಸಿರೆಳೆದಿದ್ದಾಳೆ.

ಶ್ರೀನಂದ ಅಧಿಕ ತೂಕ ಹೊಂದಿದ್ದಾಳೆಂದು ಭಾವಿಸಿ ಯೂಟ್ಯೂಬ್‌ ನೋಡಿ ಆಹಾರ ಕ್ರಮವನ್ನು ಅನುಸರಿಸುತ್ತಿದ್ದಳು. ದೇಹಕ್ಕೆ ಬೇಕಾಗಿರುವ ಆಹಾರಕ್ಕಿಂತ ಕಡಿಮೆ ಆಹಾರ ಸೇವಿಸಿ ನಂತರ ಆಕೆಯ ಹೊಟ್ಟೆ ಮತ್ತು ಅನ್ನನಾಳ ಕುಗ್ಗಿ ಅನಾರೋಗ್ಯಕ್ಕೆ ಒಳಗಾಗಿ ಪ್ರಾಣ ಬಿಟ್ಟಿದ್ದಾಳೆ ಎಂದು ವರದಿಯಾಗಿದೆ.

ನಡೆದಿದ್ದೇನು?:

ತೂಕ ಇಳಿಸಿಕೊಳ್ಳಲು ಬಯಸಿದ್ದರಿಂದ ಶ್ರೀನಂದ ತುಂಬಾ ಕಡಿಮೆ ಆಹಾರವನ್ನು ಸೇವಿಸುತ್ತಿದ್ದಳು. ಇದು ಆಕೆಯ ದೇಹದ ಮೇಲೆ ಗಂಭೀರ ಪರಿಣಾಮ ಬೀರಿದ್ದರಿಂದ, ಹುಡುಗಿಯ ಕುಟುಂಬವು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿತು. ಆದರೆ, ಅವರ ಸ್ಥಿತಿ ಹದಗೆಟ್ಟ ನಂತರ, ಅವರನ್ನು ತಲಶ್ಶೇರಿ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾದೆ ಯುವತಿ ಸಾವನ್ನಪ್ಪಿದ್ದಾಳೆ

Leave a Reply

Your email address will not be published. Required fields are marked *

Join WhatsApp Group
error: Content is protected !!