ಎಸೆಸೆಲ್ಸಿ ಪರೀಕ್ಷೆ ಜೀವನದ ಪರೀಕ್ಷೆಯಲ್ಲ. ಆದರೂ ಸಹ ಕೆಲವು ಮಕ್ಕಳು ಪರೀಕ್ಷೆಯಲ್ಲಿ ನಪಾಸಾದ ಕಾರಣಕ್ಕೆ ಖಿನ್ನತೆಗೊಳಗಾಗುವುದೂ ಉಂಟು. ಅನುತ್ತೀರ್ಣರಾದ ಮಕ್ಕಳು ಆತ್ಮಹತ್ಯೆಗೆ ಶರಣಾದ ಸುದ್ದಿಗಳು ವರ್ಷೇ ವರ್ಷೇ ಸಾಮಾನ್ಯ. ಆದರೆ ಇಲ್ಲೊಬ್ಬ ಅಪರೂಪದ ಪೋಷಕರು ತಮ್ಮ ವಿಶಿಷ್ಟ ನಡುವಳಿಕೆಯಿಂದ ಸುದ್ದಿಯಾಗಿದ್ದಾರೆ.

ಆರು ವಿಷಯಗಳಲ್ಲಿ ಆರೂ ಫೇಲ್‌ ಆದ ಮಗನಿಗೆ ಕೇಟ್‌ ಕಟ್‌ ಮಾಡಿ ತಿನ್ನಿಸಿ ಸಂಭ್ರಮಿಸಿ ಮಗನಿಗೆ ಧೈರ್ಯ ತುಂಬಿದ ಪೋಷಕರು ಒಂದು ರೀತಿಯಲ್ಲಿ ಹಲವರಿಗೆ ಮಾದರಿಯಾಗಿದ್ದಾರೆ.

ಅಭಿಷೇಕ್‌ ಯಲ್ಲಪ್ಪ ಚೊಳಚಗುಡ್ಡ ಎಸೆಸೆಲ್ಸಿಯಲ್ಲಿ 200 ಅಂಕ ಗಳಿಸಿದ್ದ. ಬಾಗಲಕೋಟೆ ಬಸವೇಶ್ವರ ಶಾಲೆಯಲ್ಲಿ ಓದುತ್ತಿದ್ದ ಈತ ಎಲ್ಲಾ ಸಬ್ಜೆಕ್ಟ್‌ ನಲ್ಲಿಯೂ ಫೇಲ್‌ ಆಗಿದ್ದ. ಈತನ ಬೇಸರ ಕಂಡು ಫೋಷಕರು ಸರ್‌ಪ್ರೈಸ್‌ ನೀಡಿದ್ದು, ಮಗನಿಗೆ ಕೇಕ್‌ ತಂದುಕೊಟ್ಟಿದ್ದಲ್ಲದೇ ಹಣೆಗೆ ಮುತ್ತನಿಟ್ಟು ಧೈರ್ಯ ತುಂಬಿದ್ದಾರೆ.

ಹದಿನೈದು ತಿಂಗಳ ಮಗುವಾಗಿದ್ದಾಗ ಎರಡು ಕಾಲು ಸುಟ್ಟುಕೊಂಡಿದ್ದ ಅಭಿಷೇಕ್‌ ನೆನಪಿನ ಶಕ್ತಿ ಕಳೆದುಕೊಂಡಿದ್ದ. ಹೀಗಾಗಿ ಈತನಿಗೆ ಎಸೆಸೆಲ್ಸಿ ಪರೀಕ್ಷೆ ಕಷ್ಟವಾಗಿ ಪರಿಣಮಿಸಿತ್ತು.

Leave a Reply

Your email address will not be published. Required fields are marked *

Join WhatsApp Group
error: Content is protected !!