
ಪುತ್ತೂರು: 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪುತ್ತೂರಿನ ಸರ್ಕಾರಿ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗೆ ಶೇ.97.61 ಫಲಿತಾಂಶ ಲಭಿಸಿದೆ. ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ 42 ವಿದ್ಯಾರ್ಥಿಗಳ ಪೈಕಿ 11 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 21 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 9 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಆರೀಫಾ(600), ಫಾತಿಮತ್ ಝಕಿಯಾ(600), ಫಾತಿಮತ್ ಆಫ್ರಿನಾ(573), ಆಯಿಷಾ ಆಶಿಕಾ(571), ಖತೀಜತ್ ಫರ್ಹಾ(566), ಫಾರಹತ್ ಬಾನು(565), ಅಹ್ಮದ್ ನಜಾದ್ ಕೆ(562), ಆಯುಷತ್ ರಾಫಿನ(552), ಫಾತಿಮ ಸಹದ(548), ಫಾತಿಮ ಶಮ್ನಾಜ್(544) ,ಫಾತಿಮ ಸಲ್ಮಿಯಾ(534) ಅಂಕ ಪಡೆದುಕೊಂಡು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಅವಿನಾಶ್ ಟಿ. ಸಿ. ತಿಳಿಸಿದ್ದಾರೆ.






