ಮುಕ್ವೆ: ಸ. ಹಿ. ಪ್ರಾ. ಶಾಲೆ ಮುಕ್ವೆಯ 2026ನೇ ಸಾಲಿನ ವಾರ್ಷಿಕೋತ್ಸವ ಸಮಿತಿಯ ನೂತನ ಪದಾಧಿಕಾರಿಗಳನ್ನು ನ. 6ರಂದು ಶಾಲಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

SDMC ಅಧ್ಯಕ್ಷ ಲತೀಫ್ ನೆರಿಗೇರಿ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಜೂಲಿಯಾನ ಮೋರಸ್ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ರವಿ ಎಂ., ಅಧ್ಯಕ್ಷರಾಗಿ ಪಿ.ಎಂ. ಅಶ್ರಫ್ ನೆರಿಗೆರಿ, ಪ್ರಧಾನ ಕಾರ್ಯದರ್ಶಿಯಾಗಿ ಗುರು ಮಣಿಯ ಹಾಗೂ ಕೋಶಾಧಿಕಾರಿಯಾಗಿ ಯೂಸಫ್ ಹಾಜಿ ಅಳಕೆ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಮಹಮ್ಮದ್ ಕುಞ್ಞ ದರ್ಕಾಸ್ ಮತ್ತು ನಸೀಮ, ಗೌರವ ಸಲಹೆಗಾರರಾಗಿ ಜೆ. ರೋಮಿಯಸ್ ಪಾಯ್ಸ್, ಸಂಘಟನಾ ಕಾರ್ಯದರ್ಶಿಯಾಗಿ ಸಿಯಾಬುದ್ದೀನ್ ಹಾಗೂ ಜೊತೆ ಕಾರ್ಯದರ್ಶಿಯಾಗಿ ರಫೀಕ್ ಮಣಿಯ ಆಯ್ಕೆಯಾದರು. ಇತರ ಏಳು ಸದಸ್ಯರನ್ನು ಸಮಿತಿಗೆ ನೇಮಕ ಮಾಡಲಾಯಿತು.
ಸಭೆಯಲ್ಲಿ ಶಾಲಾ ವಾರ್ಷಿಕೋತ್ಸವದ ಸಿದ್ಧತೆಗಳು, ಕಾರ್ಯಕ್ರಮದ ರೂಪುರೇಷೆಗಳು ಹಾಗೂ ಶಾಲೆಯ ಸರ್ವತೋಮುಖ ಅಭಿವೃದ್ಧಿ ಮತ್ತು ಶೈಕ್ಷಣಿಕ ಪ್ರಗತಿಯ ಕುರಿತು ಚರ್ಚಿಸಲಾಯಿತು.
“ನಮ್ಮೂರ ಶಾಲೆ, ನಮ್ಮೆಲ್ಲರ ಶಾಲೆ” ಎಂಬ ಅಭಿಮಾನ ಹಾಗೂ ಒಗ್ಗಟ್ಟಿನ ಮನೋಭಾವದೊಂದಿಗೆ ಶಾಲೆಯ ಅಭಿವೃದ್ಧಿಗೆ ಊರಿನ ಜನತೆ, ಹಳೆ ವಿದ್ಯಾರ್ಥಿಗಳು, ಪೋಷಕರು ಮತ್ತು ಹಿತೈಷಿಗಳು ಸಹಕಾರ ನೀಡಬೇಕು ಎಂದು ಸಭೆಯಲ್ಲಿ ಆಶಯ ವ್ಯಕ್ತಪಡಿಸಲಾಯಿತು.

Leave a Reply

Your email address will not be published. Required fields are marked *

You missed

Join WhatsApp Group
error: Content is protected !!