ಖರೀದಿ ನೆಪದಲ್ಲಿ ಆನ್ಲೈನ್ನಲ್ಲಿ ಬೈಕ್ ಬುಕ್ (Bike) ಮಾಡಿ ನಂತರ ಟೆಸ್ಟ್ ಡ್ರೈವ್ ಹೆಸರಲ್ಲಿ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬಂಡೆಪಾಳ್ಯ ಪೊಲೀಸರು (Police) ಬಂಧಿಸಿದ್ದಾರೆ. ಪ್ರದೀಪ್ ಅಲಿಯಾಸ್ ಓಎಲ್‌ಎಕ್ಸ್ ಪ್ರದೀಪ್ ಬಂಧಿತ ಆರೋಪಿ.

ಪ್ರದೀಪ್ನನ್ನು ಬಂಧಿಸಿ ವಿಚಾರಣಗೆ ಒಳಪಡಿಸಿದಾಗಿ ಹಲವು ಸಂಗತಿ ಬಾಯಿ ಬಿಟ್ಟಿದ್ದಾನೆ. ಓಎಲ್‌ಎಕ್ಸ್ ನಲ್ಲಿ ಬೈಕ್ ಮಾರಾಟಗಾರರನ್ನು ಹುಡುಕುತ್ತಿದ್ದನು. ಟೆಸ್ಟ್ ಡ್ರೈವ್ಗೆ ಬೈಕ್ ಪಡೆಯುವ ವೇಳೆ ದಾಖಲೆಗಳನ್ನು ಪರಿಶೀಲಿಸುತ್ತೇನೆಂದು ಅಸಲಿ ದಾಖಲೆಗಳನ್ನು ಪಡೆಯುತ್ತಿದ್ದನು. ದುಡ್ಡು ಕೊಡುವ ರೀತಿಯಲ್ಲಿ ಬಿಲ್ಡಪ್ ಕೊಟ್ಟು, ಅಸಲಿ ದಾಖಲೆಗನ್ನು ತೆಗೆದುಕೊಂಡು ಬೈಕ್ ಸಮೇತ ಪರಾರಿಯಾಗುತ್ತಿದ್ದನು.

ಆರೋಪಿ ಪ್ರದೀಪ ಕಡೂರು ಮೂಲದವನಾಗಿದ್ದು, ನೆಲಮಂಗಲದಲ್ಲಿ ನೆಲೆಸಿದ್ದಾನೆ. ಆರೋಪಿಯಿಂದ ಐದು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕದ್ದ ಬೈಕ್ಗಳೆಲ್ಲವೂ ಓಎಲ್‌ಎಕ್ಸ್ ಮೂಲಕವೇ ಬುಕ್ ಮಾಡಿ ಕದ್ದಿದ್ದ ಎನ್ನಲಾಗಿದೆ.

ನಂತರ ಮೊದಲೇ ಪಡೆದಿದ್ದ ದಾಖಲಾತಿಗಳನ್ನು ಬಳಸಿಕೊಂಡು ನಕಲಿಯಾಗಿ ಸಹಿ ಮಾಡಿ ಆರ್ಟಿಒ ಮೂಲಕ ದಾಖಲೆಗನ್ನು ವರ್ಗಾವಣೆ ಮಾಡಿಸಿ ಒಳ್ಳೆಯ ದರಕ್ಕೆ ಬೇರೆಯವರಿಗೆ ಬೈಕ್ ಮಾರಾಟ ಮಾಡುತ್ತಿದ್ದನು. ತನಗೆ ಬಂದ ಹಣದಿಂದ ಶೋಕಿ ಜೀವನ ಮಾಡುತ್ತಿದ್ದ ಆಂತ ಗೊತ್ತಾಗಿದೆ. ಸದ್ಯ ಈ ಬಗ್ಗೆ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!