
ಶಿಬಾಜೆ ಗ್ರಾಮದ ಬರ್ಗುಳ ಸಮೀಪ, ಶೀನ ಎಂಬವರ ಮನೆಯ ಪಕ್ಕ ಹರಿಯುತ್ತಿರುವ ಹಳ್ಳದಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿತ್ತು.
ಪತ್ತಿಮಾರು ನಿವಾಸಿ ಪ್ರಸಾದ್ ಪೂಜಾರಿ ಅವರದ್ದು ಎಂದು ಆತನ ಮನೆಯವರು ಶವದ ಗುರುತು ಹಿಡಿದ ಬಳಿಕ ತಿಳಿದು ಬಂದಿದೆ.
ಶಿಶಿಲ ಅರಸಿನಮಕ್ಕಿ ಶೌರ್ಯ ವಿಪತ್ತು ತಂಡದವರಾದ ಅವಿನಾಶ್ ಭಿಡೆ, ಕಿರಣ್, ಕೃಷ್ಣಪ್ಪ, ಬೇಬಿ ಪೆರ್ಲ, ಸಚಿನ್ ಭಿಡೆ, ರವೀಂದ್ರ ರವರು ಸ್ಥಳಕ್ಕೆ ಆಗಮಿಸಿ ಶವ ಮೇಲೆ ತೆಗೆಯುವ ಕೆಲಸ ಮಾಡಿದ್ದಾರೆ.
ಧರ್ಮಸ್ಥಳ ಠಾಣಾ ಪೊಲೀಸರು ಮಹಜರು ನಡೆಸಿದ್ದಾರೆ.









