ಬಾಲಿವುಡ್‌ ನಟಿ ಕರೀಷ್ಮಾ ಕಪೂರ್‌ ಅವರ ಮಾಜಿ ಪತಿ ಕೈಗಾರಿಕೋದ್ಯಮಿ ಸುಂಜಯ್‌ ಕಪೂರ್‌ ಜೂನ್‌ 12 ರಂದು ತಮ್ಮ 53 ನೇ ವಯಸ್ಸಿನಲ್ಲಿ ಹಠಾತ್ತನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ವರದಿಗಳ ಪ್ರಕಾರ ಸುಂಜಯ್‌ ಇಂಗ್ಲೆಂಡ್‌ನಲ್ಲಿ ನಡೆದ ಪೋಲೋ ಪಂದ್ಯದಲ್ಲಿ ಆಟವಾಡುವಾಗ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಸುಂಜಯ್‌ ಪೋಲೋ ಆಟಗಾರ ಮಾತ್ರವಲ್ಲದೇ ಸೋನಾ ಪೋಲೋ ತಂಡದ ಮಾಲೀಕರೂ ಆಗಿದ್ದು, ಅಂತಾರಾಷ್ಟ್ರೀಯ ಪೋಲೋ ಸರ್ಕ್ಯೂಟ್‌ಗಳಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದರು.

ಸುಂಜಯ್‌ ನಿಧನಕ್ಕೂ ಕೆಲವೇ ಗಂಟೆಗಳ ಮೊದಲು ಅಹಮದಾಬಾದ್‌ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ಪತನದ ಬಗ್ಗೆ ಸಂತಾಪದ ಟ್ವೀಟ್‌ ಮಾಡಿದ್ದರು. ಅವರು ಟ್ವೀಟ್‌ ಮಾಡಿದ ಕೆಲವೇ ಗಂಟೆಗಳ ಬಳಿಕ ಹಠಾತ್‌ ನಿಧನ ದುರಂತವೆನಿಸಿದೆ.

ಸುಂಜಯ್‌ ತಮ್ಮ ಟ್ವೀಟ್‌ನಲ್ಲಿ, ಅಹಮದಾಬಾದ್‌ನಲ್ಲಿ ಏರ್‌ ಇಂಡಿಯಾ ದುರಂತ ಭೀಕರ ಸುದ್ದಿ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಪೀಡಿತ ಎಲ್ಲಾ ಕುಟುಂಬಗಳೊಂದಿಗೆ ಇದೆ. ಈ ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿ ಸಿಗಲಿ ಎಂದು ಬರೆದಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!