ಅಮೆರಿಕದ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತೆ ಭಾರತದ (India) ವ್ಯಾಪಾರ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನವದೆಹಲಿ ಈ ಮೊದಲೇ ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಸುಂಕ (Tariffs) ವಿಧಿಸಿತ್ತು.

ಭಾರತದ ವ್ಯಾಪಾರ ಪದ್ಧತಿಗಳು ಅಮೆರಿಕದ ಉತ್ಪಾದಕರಿಗೂ ತುಂಬಾ ನಷ್ಟವನ್ನುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.

ಓವಲ್ ಕಚೇರಿಯಿಂದ ಮಾತನಾಡಿದ ಟ್ರಂಪ್, ನಾವು ಭಾರತದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತೇವೆ. ಆದರೆ ಹಲವು ವರ್ಷಗಳಿಂದ ಭಾರತದೊಂದಿಗಿನ ನಮ್ಮ ಸಂಬಂಧ ಏಕಪಕ್ಷೀಯವಾಗಿದೆ. ನಾನು ಅಧಿಕಾರಕ್ಕೆ ಬಂದ ನಂತರ ನಮ್ಮ ಜನತೆಯ ಪರವಾಗಿ ಪ್ರತಿ ಸುಂಕ ವಿಧಿಸಿದ್ದೇವೆ. ಭಾರತ ನಮಗೆ ತುಂಬಾ ಮೊದಲಿನಿಂದಲೇ ಭಾರೀ ಸುಂಕ ವಿಧಿಸುತ್ತಿದೆ. ಅದು ವಿಶ್ವದಲ್ಲೇ ಅತಿ ಹೆಚ್ಚಾಗಿದೆ. ಆದ್ದರಿಂದ ನಾವು ಹೆಚ್ಚು ಭಾರತದೊಂದಿಗೆ ವ್ಯವಹಾರ ಮಾಡುತ್ತಿರಲಿಲ್ಲ. ಆದರೆ ಅವರು ನಮ್ಮೊಂದಿಗೆ ವ್ಯವಹಾರ ಮಾಡುತ್ತಿದ್ದರು. ಏಕೆಂದರೆ ನಾವು ಅವರಿಗೆ ಮೂರ್ಖತನದಿಂದ ಸುಂಕ ವಿಧಿಸುತ್ತಿರಲಿಲ್ಲ ಎಂದು ಹೇಳಿದರು.

ಅಮೆರಿಕದಲ್ಲಿ ಅವರಿಗೆ ಸುಂಕ ಇರದೇ ಹೋಗಿದ್ದರಿಂದ ಅವರು ಬೃಹತ್ ಪ್ರಮಾಣದಲ್ಲಿ ವ್ಯಾಪಾರ ಮಾಡುತ್ತಿದ್ದರು. ಅವರು ಏನೇ ಮಾಡಿದರೂ ಇಲ್ಲಿ ಮಾರಲು ಕಳುಹಿಸುತ್ತಿದ್ದರು. ನಮ್ಮ ದೇಶಕ್ಕೆ ತಂದು ಸುರಿಯುತ್ತಿದ್ದರು. ಆ ವಸ್ತುಗಳನ್ನು ಇಲ್ಲಿ ತಯಾರಿಸಲಾಗುವುದಿಲ್ಲ ಎಂಬುದು ನಿಮಗೆ ತಿಳಿದಿದೆ. ಆದರೆ ಅವರು ನಮಗೆ 100% ಸುಂಕವನ್ನು ವಿಧಿಸುತ್ತಿದ್ದರಿಂದ ನಾವು ಅವರಿಗೆ ಏನನ್ನೂ ಕಳುಹಿಸುತ್ತಿರಲಿಲ್ಲ ಎಂದು ಟ್ರಂಪ್ ತಿಳಿಸಿದರು.

ಉದಾಹರಣೆಗೆ, ಹಾರ್ಲೆ-ಡೇವಿಡ್ಸನ್ ಅನ್ನು ಭಾರತಕ್ಕೆ ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಮೋಟಾರ್‌ಸೈಕಲ್ ಮೇಲೆ 200% ಸುಂಕವಿತ್ತು. ಹಾಗಾದರೆ ವ್ಯಾಪಾರ ಹೇಗಾಗುತ್ತದೆ? ಹೀಗಾಗಿ ಹಾರ್ಲೆ-ಡೇವಿಡ್ಸನ್ ಭಾರತಕ್ಕೆ ಹೋಗಿ ಮೋಟಾರ್‌ಸೈಕಲ್ ಸ್ಥಾವರವನ್ನು ನಿರ್ಮಿಸಿದರು. ಈಗ ಅವರು ಸುಂಕವನ್ನು ಪಾವತಿಸದೇ ಮೋಟಾರು ಸೈಕಲ್‌ಗಳನ್ನು ಮಾರಾಟ ಮಾಡುತ್ತಾರೆ. ಅನ್ಯಾಯದ ಸುಂಕ ರಚನೆಗಳು ಕಂಪನಿಗಳನ್ನು ಅಮೆರಿಕದ ಹೊರಗೆ ಹೋಗಿ ಉತ್ಪಾದನೆ ಮಾಡುವಂತೆ ಒತ್ತಾಯಿಸುತ್ತಿವೆ ಎಂದು ಟ್ರಂಪ್‌ ಕಟುವಾಗಿ ಟೀಕಿಸಿದರು.

ಹೀಗಾಗಿ ಈಗ ನಾವು ಮಾಡುತ್ತಿರುವ ರೀತಿ ಅಕ್ಷರಶಃ ಸಾವಿರಾರು ಕಂಪನಿಗಳು ವಾಪಸ್ ಯುಎಸ್‌ಗೆ ಬರುವಂತೆ ಮಾಡುತ್ತಿದೆ. ನಮ್ಮಲ್ಲಿ ಈಗ ನಿರ್ಮಾಣ ಹಂತದಲ್ಲಿ ಅಥವಾ ವಿನ್ಯಾಸಗೊಳಿಸಲಾಗುತ್ತಿರುವ ಅನೇಕ ಕಾರು ಕಂಪನಿ ಕಾರ್ಖಾನೆಗಳಿವೆ. ಮತ್ತು ಅವರು ಚೀನಾದಿಂದ ಬರುತ್ತಿದ್ದಾರೆ, ಮೆಕ್ಸಿಕೊದಿಂದ, ಕೆನಡಾದಿಂದಲೂ ಬರುತ್ತಿದ್ದಾರೆ. ಆದರೆ ಅವರು ಇಲ್ಲಿ ನಿರ್ಮಿಸಲು ಬಯಸುವ ಕಾರಣ ಅವರು ನಮ್ಮ ದೇಶಕ್ಕೆ ಬರುತ್ತಿದ್ದಾರೆ ಎಂದು ಟ್ರಂಪ್ ಹೇಳಿದರು.

ಅವರೆಲ್ಲರು ಎರಡು ಕಾರಣಗಳಿಗಾಗಿ ಇಲ್ಲಿ ನಿರ್ಮಿಸಲು ಬಯಸುತ್ತಾರೆ. ಮೊದಲನೆಯದು, ಅವರು ಇಲ್ಲಿರಲು ಬಯಸುತ್ತಾರೆ ಮತ್ತು ಎರಡನೆಯದು, ಸುಂಕಗಳು ಅವರನ್ನು ರಕ್ಷಿಸುತ್ತಿವೆ. ಮತ್ತು ಮೂರನೆಯದು, ಅವರು ಸುಂಕಗಳನ್ನು ಪಾವತಿಸುವುದನ್ನು ತಪ್ಪಿಸಲು ಬಯಸುತ್ತಾರೆ. ಅವರು ಇಲ್ಲಿ ತಮ್ಮ ಕಾರುಗಳನ್ನು ನಿರ್ಮಿಸಿದರೆ ಅವರಿಗೆ ಪಾವತಿಸಲು ಯಾವುದೇ ಸುಂಕಗಳು ಇರುವುದಿಲ್ಲ. ಇಲ್ಲಿ ನಿರ್ಮಿಸಿದ ವಸ್ತುಗಳಿಗೆ ಯಾವುದೇ ಸುಂಕಗಳಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಅವರು ವಿವರಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!