ಗೋವಾ: ಗೋವಾದ ಮನೋಹರ್ ಪರಿಕ್ಕರ್ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ವೈದ್ಯರ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸ್ಥಳೀಯ ವೈದ್ಯರು ಗಮನಾರ್ಹ ಸಾಧನೆ ಮಾಡಿದ್ದಾರೆ.
ಪುರುಷರ ಮುಕ್ತ ವಿಭಾಗದಲ್ಲಿ ಡಾ. ವಿಖ್ಯಾತ್ (Deputy chief physician, ಡಾ. ಪ್ರದೀಪ್ ಕುಮಾರ್ ಆಯುರ್ವೇದ ಆಸ್ಪತ್ರೆ) ಹಾಗೂ ಡಾ. ವಿಕಾಸ್ (ನೇತ್ರತಜ್ಞ, ಅಶ್ವಿನ್ ಕಣ್ಣಿನ ಚಿಕಿತ್ಸಾಲಯ ಮತ್ತು ಆಪ್ಟಿಕಲ್ಸ್, ಕಣ್ಣನ್ಸ್ ಸಂಕೀರ್ಣ) ರನ್ನರ್-ಅಪ್ ಸ್ಥಾನ ಪಡೆದು ಮೆಚ್ಚುಗೆಗೆ ಪಾತ್ರರಾದರು.
ರಾಷ್ಟ್ರಮಟ್ಟದ ಈ ಕ್ರೀಡಾಕೂಟದಲ್ಲಿ ವಿವಿಧ ರಾಜ್ಯಗಳಿಂದ ಭಾಗವಹಿಸಿದ ವೈದ್ಯರ ನಡುವೆ ಕಠಿಣ ಸ್ಪರ್ಧೆ ನಡೆಯಿತು. ಅಂತಿಮ ಸುತ್ತಿನವರೆಗೆ ಉತ್ತಮ ಪ್ರದರ್ಶನ ನೀಡಿದ ಡಾ. ವಿಖ್ಯಾತ್ ಮತ್ತು ಡಾ. ವಿಕಾಸ್ ಜೋಡಿ ರನ್ನರ್-ಅಪ್ ಸ್ಥಾನವನ್ನು ತಮ್ಮದಾಗಿಸಿಕೊಂಡರು.

Leave a Reply

Your email address will not be published. Required fields are marked *

Join WhatsApp Group
error: Content is protected !!