ಅಮೆರಿಕದ(America) ಪೌರತ್ವ ಕಾಯಿದೆಗಳ ಬಗ್ಗೆ ಮಾತನಾಡುವಾಗ ಭಾರತ ಮತ್ತು ಚೀನಾವನ್ನು “ನರಕ” (Hellholes) ಎಂದು ಕರೆದ ಡೊನಾಲ್ಡ್ ಟ್ರಂಪ್(Donald Trump) ಅವರಿಗೆ ಇರಾನ್(Iran) ತಿರುಗೇಟು ನೀಡಿದೆ.
ಮುಂಬೈನಲ್ಲಿರುವ ಇರಾನ್ ರಾಯಭಾರಿ ಕಚೇರಿಯು (Consulate General) ಈ ಬಗ್ಗೆ ‘X’ ನಲ್ಲಿ ಪ್ರತಿಕ್ರಿಯಿಸಿದ್ದು, ಮಹಾರಾಷ್ಟ್ರದ ಸುಂದರ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಪರಂಪರೆಯ ವಿಡಿಯೋವನ್ನು ಹಂಚಿಕೊಂಡಿದೆ.
ಅಮೆರಿಕದ ‘ಜನ್ಮಸಿದ್ಧ ಪೌರತ್ವ’ (Birthright Citizenship) ನಿಯಮಗಳನ್ನು ಟೀಕಿಸುವ ಸಂದರ್ಭದಲ್ಲಿ ಟ್ರಂಪ್ ಭಾರತ ಮತ್ತು ಚೀನಾವನ್ನು “ನರಕ ಸದೃಶ ದೇಶಗಳು” ಎಂದು ಕರೆದಿದ್ದರು. ಟ್ರಂಪ್ ಅವರಿಗೆ ಒಂದು ರೀತಿಯ ‘ಸಾಂಸ್ಕೃತಿಕ ಶುದ್ಧೀಕರಣ’ದ (Cultural Detox) ಅಗತ್ಯವಿದೆ ಎಂದು ಲೇವಡಿ ಮಾಡಿರುವ ಇರಾನ್, “ಒಮ್ಮೆ ಭಾರತಕ್ಕೆ ಬಂದು ನೋಡಿ, ಆಮೇಲೆ ಮಾತನಾಡಿ. ಆಗ ನಿಮ್ಮ ಇಂತಹ ಅನಗತ್ಯ ‘ಬಕ್ವಾಸ್’ (ಹರಟೆ) ಕಡಿಮೆಯಾಗಬಹುದು” ಎಂದು ಟಾಂಗ್ ನೀಡಿದೆ.
ಭಾರತದ ಪರವಾಗಿ ಇರಾನ್ ರಾಯಭಾರಿ ಕಚೇರಿ ನೀಡಿದ ಈ ಖಡಕ್ ಉತ್ತರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.














