ಭಾರತ ಮತ್ತು ನೇಪಾಳ ನಡುವಿನ ದಶಕಗಳ ಕಾಲದ ರೋಟಿ-ಬೇಟಿ ಸಂಬಂಧಕ್ಕೆ ಈಗ ಹೊಸದೊಂದು ವಿಘ್ನ ಎದುರಾಗಿದೆ. ನೇಪಾಳದ ನೂತನ ಸರ್ಕಾರವು ಭಾರತದಿಂದ ಬರುವ ದಿನಬಳಕೆಯ ವಸ್ತುಗಳ ಮೇಲೆ ಕಠಿಣ ಕಸ್ಟಮ್ಸ್ ನಿಯಮಗಳನ್ನು ಜಾರಿಗೊಳಿಸಿದ್ದು ಗಡಿ ಭಾಗದ ಮಾರುಕಟ್ಟೆಗಳಲ್ಲಿ ಆತಂಕ ಮತ್ತು ಆಕ್ರೋಶ ಮನೆಮಾಡಿದೆ.

ಏನಿದು ಹೊಸ 100 ರೂಪಾಯಿ ನಿಯಮ?

ನೇಪಾಳದ ಬಲೇಂದ್ರ ಶಾ (Balendra Shah) ಸರ್ಕಾರವು ಏಪ್ರಿಲ್ 2026 ರಿಂದ ಜಾರಿಗೆ ಬರುವಂತೆ ಅತ್ಯಂತ ಕಠಿಣ ತೆರಿಗೆ ಪದ್ಧತಿಯನ್ನು ಜಾರಿಗೆ ತಂದಿದೆ.

ಕಡಿಮೆ ಮಿತಿ: ಭಾರತದಿಂದ ನೇಪಾಳಕ್ಕೆ ಕೇವಲ 100 ನೇಪಾಳಿ ರೂಪಾಯಿ (ಸುಮಾರು 63 ಭಾರತೀಯ ರೂಪಾಯಿ) ಗಿಂತ ಹೆಚ್ಚಿನ ಬೆಲೆಯ ಯಾವುದೇ ವಸ್ತುವನ್ನು ತಂದರೂ ಅದರ ಮೇಲೆ ಕಡ್ಡಾಯವಾಗಿ ತೆರಿಗೆ ಕಟ್ಟಬೇಕು.

ಭಾರಿ ಸುಂಕ: ಈ ತೆರಿಗೆಯು ಶೇ. 5 ರಿಂದ ಆರಂಭವಾಗಿ ಕೆಲವು ವಸ್ತುಗಳ ಮೇಲೆ ಶೇ. 80 ರಷ್ಟು ಇರಲಿದೆ ಅಡುಗೆ ಎಣ್ಣೆ, ಸಕ್ಕರೆ, ಬಟ್ಟೆ, ಮತ್ತು ಕೋಲ್ಡ್ ಡ್ರಿಂಕ್ಸ್‌ಗಳಿಗೂ ಈ ನಿಯಮ ಬಿಟ್ಟಿಲ್ಲ.

ಸಾಮಾನ್ಯರಿಗೂ ದಂಡ: ಮೊದಲೆಲ್ಲಾ ಮನೆಗೆ ಬೇಕಾದ ಸಣ್ಣಪುಟ್ಟ ಸಾಮಾನುಗಳನ್ನು ತರಲು ರಿಯಾಯಿತಿ ಇತ್ತು. ಆದರೆ ಈಗ ಸಣ್ಣ ತಿಂಡಿಯ ಪ್ಯಾಕೆಟ್ ತಂದರೂ ಕಸ್ಟಮ್ಸ್ ಅಧಿಕಾರಿಗಳು ಬಿಡುತ್ತಿಲ್ಲ.

ಭಾರತದ ಬಾಳೆಹಣ್ಣಿಗೆ ನೇಪಾಳದ ನಿರ್ಬಂಧ ಏಕೆ?

ಬಾಳೆಹಣ್ಣಿನ ಆಮದಿನ ಮೇಲೆ ನೇಪಾಳ ಸರ್ಕಾರವು ಸಂಪೂರ್ಣ ನಿಷೇಧ ಹೇರಿರುವುದು ಈಗ ದೊಡ್ಡ ಸುದ್ದಿಯಾಗಿದೆ.

ರೋಗದ ಭೀತಿ: ಭಾರತದ ಬಾಳೆಹಣ್ಣುಗಳಲ್ಲಿ ಪನಾಮ ರೋಗ (Panama Disease – TR4) ಎಂಬ ಅಪಾಯಕಾರಿ ಶಿಲೀಂಧ್ರ ರೋಗ ಕಾಣಿಸಿಕೊಂಡಿದೆ ಎಂಬ ನೆಪವೊಡ್ಡಿ ನೇಪಾಳವು ಈ ನಿರ್ಧಾರ ಕೈಗೊಂಡಿದೆ.

ಉದ್ದೇಶ: ಇದರಿಂದ ನೇಪಾಳದ ಸ್ಥಳೀಯ ಬಾಳೆಹಣ್ಣು ಬೆಳೆಗಾರರಿಗೆ ಲಾಭವಾಗುತ್ತಿದ್ದರೂ, ಮಾರುಕಟ್ಟೆಯಲ್ಲಿ ಹಣ್ಣಿನ ಬೆಲೆ ಒಂದು ಡಜನ್‌ಗೆ 250 ರಿಂದ 350 ರೂಪಾಯಿವರೆಗೆ ಏರಿಕೆಯಾಗಿ ಸಾಮಾನ್ಯ ಜನರು ತತ್ತರಿಸುತ್ತಿದ್ದಾರೆ.

ಉದ್ವಿಗ್ನ ಸ್ಥಿತಿ: ಪ್ರಯಾಣಿಕರ ಪರದಾಟ

ಉತ್ತರ ಪ್ರದೇಶ ಮತ್ತು ಬಿಹಾರದ ಗಡಿ ಭಾಗಗಳಲ್ಲಿ ಈಗ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಗಡಿಯಲ್ಲಿ ನೇಪಾಳದ ಸಶಸ್ತ್ರ ಪೊಲೀಸ್ ಪಡೆ (APF) ಪ್ರತಿ ಬ್ಯಾಗ್ ಅನ್ನು ತಪಾಸಣೆ ಮಾಡುತ್ತಿದೆ. ಇದರಿಂದಾಗಿ ಗಂಟೆಗಟ್ಟಲೆ ಕ್ಯೂ ನಿಲ್ಲುವಂತಾಗಿದ್ದು, ಜನರು ಈ ನಿಯಮವನ್ನು “ಅಘೋಷಿತ ಆರ್ಥಿಕ ದಿಗ್ಬಂಧನ” ಎಂದು ಕರೆಯುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!