ಪುತ್ತೂರು: ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ಪುತ್ತೂರು ಘಟಕದ ಸೇವಾ ಯೋಜನೆಯಾದ ‘ವಜ್ರತೇಜಸ್’ ಹಿಂದೂ ಕವಚ್ ವಾಟ್ಸ್‌ಆಪ್‌ ಗ್ರೂಪ್ ಮೂಲಕ ಸಂಗ್ರಹಿಸಲಾದ ನಿಧಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಸಂಪ್ಯದ ನಿವಾಸಿ ವಿಘ್ನೇಶ್ ಭಟ್ ಅವರಿಗೆ ಸಹಾಯಧನ ನೀಡಲಾಯಿತು

ವಜ್ರತೇಜಸ್ ತಂಡದ ಸದಸ್ಯರು ವಿಘ್ನೇಶ್ ಭಟ್ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಸಂಗ್ರಹಿತ ಮೊತ್ತವನ್ನು ಹಸ್ತಾಂತರಿಸಿದರು. ಸಮಾಜದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ವಜ್ರತೇಜಸ್ ತಂಡ ನಿರಂತರ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ

ಈ ಸಂದರ್ಭದಲ್ಲಿ ವಜ್ರತೇಜಸ್ ಹಿಂದೂ ಕವಚ್ ಅಧ್ಯಕ್ಷ ಮುರಳೀಕೃಷ್ಣ ಹಸಂತಡ್ಕ, ಜಿಲ್ಲಾ ಪ್ರಚಾರ-ಪ್ರಸಾರ ಪ್ರಮುಖ್ ಕೇಶವಪ್ರಸಾದ್ ಬಜಪ್ಪಳ, ವಿಶ್ವ ಹಿಂದೂ ಪರಿಷದ್ ಗ್ರಾಮಾಂತರ ಅಧ್ಯಕ್ಷ ಜಯಂತ್ ಶೆಟ್ಟಿ ಕಂಬಳತ್ತಡ್ಡ, ಪುತ್ತೂರು ನಗರ ಸಾಪ್ತಾಹಿಕ ಮಿಲನ್ ಪ್ರಮುಖ್ ಸಂದೀಪ್ ಸಿಂಗಣಿ ಹಾಗೂ ವಜ್ರತೇಜಸ್ ಸದಸ್ಯ ಡಾ. ಸುರೇಶ್ ಪುತ್ತೂರಾಯರು ಉಪಸ್ಥಿತರಿದ್ದರು.

ಸಮಾಜಮುಖಿ ಕಾರ್ಯಗಳ ಮೂಲಕ ಅಗತ್ಯವಿರುವವರಿಗೆ ನೆರವಾಗುವ ವಜ್ರತೇಜಸ್ ತಂಡದ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!