ಉತ್ತರ ಪ್ರದೇಶದ ಕಾನ್ಪುರ ದೇಹತ್ (Viral News) ಜಿಲ್ಲೆಯ ಅತ್ಯಂತ ವಿಲಕ್ಷಣ ಪ್ರೇಮ ಕಥೆಯೊಂದು ಮುನ್ನೆಲೆಗೆ ಬಂದಿದ್ದು, ಇದನ್ನು ಕೇಳಿ ಸಾಮಾಜಿಕ ಜಾಲತಾಣಗಳ ಮಂದಿ ಅಕ್ಷರಶಃ ದಂಗಾಗಿದ್ದಾರೆ. ತನ್ನೊಂದಿಗೆ ಏಳು ಹೆಜ್ಜೆ ಇಟ್ಟಿದ್ದ ಹೆಂಡತಿಯನ್ನು ಅರ್ಧದಲ್ಲೇ ಕೈಬಿಟ್ಟ ವ್ಯಕ್ತಿಯೊಬ್ಬ, ಅದೇ ಹೆಂಡತಿಯನ್ನು ಹೆತ್ತ ಸ್ವಂತ ಅತ್ತೆಯನ್ನೇ ಪ್ರೀತಿಸಿ ಕೋರ್ಟ್ ಮ್ಯಾರೇಜ್ ಮಾಡಿಕೊಂಡಿರುವ ಘಟನೆ ಕಾನ್ಪುರ ದೇಹತ್‌ನ ಅಕ್ಬರ್‌ಪುರ ಎಂಬಲ್ಲಿ ನಡೆದಿದೆ.

ವಿಡಿಯೋ ರಿಲೀಸ್‌ ಮಾಡಿದ ಜೋಡಿ
ಈ ವಿಚಿತ್ರ ಮದುವೆಯ ಸಂಪೂರ್ಣ ವಿವರಗಳು ಇನ್ನು ಅಧಿಕೃತವಾಗಿ ಬಹಿರಂಗಗೊಳ್ಳಬೇಕಾಗಿದ್ದರೂ, ಈ ಸುದ್ದಿ ಮಾತ್ರ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಹೊಸ ಜೋಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆದ ಬೆನ್ನಲ್ಲೇ ಈ ವಿವಾದ ಮುನ್ನೆಲೆಗೆ ಬಂದಿದೆ. ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ ಈ ಜೋಡಿಯು ತಮ್ಮ ಮದುವೆಯ ಪ್ರಮಾಣಪತ್ರವನ್ನು ಕೈಯಲ್ಲಿ ಹಿಡಿದುಕೊಂಡು, ಸಾರ್ವಜನಿಕರು ತಮ್ಮ ಸಂಬಂಧವನ್ನು ಒಪ್ಪಿಕೊಳ್ಳಬೇಕು ಮತ್ತು ತಮಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ.

ವರದಿಗಳ ಪ್ರಕಾರ, ಮಗಳ ಮದುವೆಯಾದ ನಂತರ ಈ ಅಳಿಯ ಮತ್ತು ಅತ್ತೆಯ ನಡುವೆ ಆತ್ಮೀಯ ಒಡನಾಟ ಬೆಳೆದಿತ್ತು. ಇದು ಕ್ರಮೇಣ ಪ್ರೀತಿಗೆ ತಿರುಗಿ, ಕೊನೆಗೆ ಹೆಂಡತಿಗೆ ಕೈಕೊಟ್ಟು ಅತ್ತೆಯನ್ನೇ ಮದುವೆಯಾಗುವ ನಿರ್ಧಾರಕ್ಕೆ ಈತ ಬಂದಿದ್ದಾನೆ. ಸದ್ಯ ಈ ವಿಚಾರ ಇಡೀ ದೇಶಾದ್ಯಂತ ಚರ್ಚೆಯಾಗುತ್ತಿದ್ದರೂ, ಈ ಪ್ರಕರಣದ ಸಂಬಂಧ ಇದುವರೆಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ. ಹಾಗೆಯೇ ಸ್ಥಳೀಯ ಆಡಳಿತವಾಗಲಿ ಅಥವಾ ಕಾನೂನು ಇಲಾಖೆಯಾಗಲಿ ಈ ಬಗ್ಗೆ ಯಾವುದೇ ಕಾನೂನು ಕ್ರಮವನ್ನು ಘೋಷಿಸಿಲ್ಲ.

ನೆಟ್ಟಿಗರಿಂದ ಕಮೆಂಟ್‌ಗಳ ಮಳೆ
ಟ್ವಿಟರ್, ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದಂತೆ ಲಕ್ಷಾಂತರ ನೆಟ್ಟಿಗರು ತರಹೇವಾರಿ ಕಾಮೆಂಟ್‌ಗಳು ಹಾಗೂ ಮೀಮ್ಸ್‌ಗಳ ಮೂಲಕ ತಮ್ಮ ಆಕ್ರೋಶವನ್ನ ಹೊರಹಾಕುತ್ತಿದ್ದಾರೆ. ಕಾನ್ಪುರದ ವ್ಯಕ್ತಿ ಅತ್ತೆಯನ್ನೇ ಮದುವೆಯಾಗಿದ್ದಾನೆ. ಈಗ ಆತನ ಮಾಜಿ ಹೆಂಡತಿ ಆತನನ್ನು ‘ಅಪ್ಪ’ ಅಂತ ಕರೆಯಬೇಕಾ? ಮತ್ತು ಆಕೆಯ ಮಕ್ಕಳು ಆಕೆಯನ್ನು ಅಜ್ಜಿ ಅನ್ನಬೇಕಾ ಅಥವಾ ದೊಡ್ಡಮ್ಮ? ಇವರ ಕೌಟುಂಬಿಕ ವ್ಯವಸ್ಥೆ ಈಗ ಕಗ್ಗಂಟಾಗಿದೆ” ಎಂದು ಲೇವಡಿ ಮಾಡಿದ್ದಾರೆ.

ಇನ್ನು ಕೆಲವರು ಈ ಸಂಬಂಧದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಗಂಡಸರು ಇಂತಹ ತಪ್ಪು ಮಾಡುತ್ತಾರೆ ಸರಿ, ಆದರೆ ಈ ಮಹಿಳೆಗೆ ಏನಾಗಿದೆ? ಹೆತ್ತ ಮಗಳ ಜೀವನವನ್ನೇ ಹೀಗೆ ಹಾಳು ಮಾಡುವುದು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!