ಪುತ್ತೂರು: ರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ 110/33/11 ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪುತ್ತೂರು ಟೌನ್ ಓಲ್ಡ್ ಫೀಡರ್‌ನಲ್ಲಿ ಜೂನ್ 11 (ಗುರುವಾರ) ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ನಿಲುಗಡೆಯಿಂದ ಕೋರ್ಟ್ ರಸ್ತೆ, ಮಿನಿ ವಿಧಾನ ಸೌಧ, ಚೇತನಾ ಆಸ್ಪತ್ರೆ, ಪರ್ಲಡ್ಕ, ಬೈಪಾಸ್, ಗೋಳಿಕಟ್ಟೆ, ಕುಂಜೂರು ದೇವಸ್ಥಾನ, ತೆಂಕಿಲ, ಬಪ್ಪಳಿಗೆ, ಬಾಲವನ, ಉರ್ಲಾಂಡಿ, ಸರ್ಕಾರಿ ಆಸ್ಪತ್ರೆ, ಕರ್ಮಲ ಹಾಗೂ ಬೊಳುವಾರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಪರಿಣಾಮಕ್ಕೊಳಗಾಗಲಿವೆ.
ಆದ್ದರಿಂದ ಸಂಬಂಧಿತ ಪ್ರದೇಶಗಳ ವಿದ್ಯುತ್ ಬಳಕೆದಾರರು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!