ಪುತ್ತೂರು: ಮಿತ್ತೂರು ಸಮೀಪದ ಪರ್ಲೋಟು ಎಂಬಲ್ಲಿ ಆಕ್ಟಿವಾ ಹಾಗೂ ಕಾರು ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಲ್ಲೇಗ ಸಮೀಪದ ಮುರ ನಿವಾಸಿ ಹರ್ಷದ್ (ಯುವಕ) ಮೃತಪಟ್ಟಿದ್ದಾರೆ.ಅಪಘಾತದ ರಭಸಕ್ಕೆ ಆಕ್ಟಿವಾ ನಜ್ಜುಗುಜ್ಜಾಗಿದ್ದು, ಹರ್ಷದ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಮೃತ ಹರ್ಷದ್ ಅವರು ಕಲ್ಲೇಗ ಜುಮಾ ಮಸೀದಿ ಜಮಾಅತ್‌ಗೆ ಒಳಪಟ್ಟ ಮುರ ನಿವಾಸಿ, ಮರ್ಹೂಮ್ ರಝಾಕ್ ಸಾಹೇಬ್ ಅವರ ಪುತ್ರ ಹಾಗೂ ಇರ್ಷಾದ್ ಅವರ ಸಹೋದರರಾಗಿದ್ದಾರೆ












