ಪುತ್ತೂರು: ರಸ್ತೆ ಅಗಲೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ವಿದ್ಯುತ್ ಮಾರ್ಗ ಬದಲಾವಣೆ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಅ.31ರಂದು ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಪುತ್ತೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.110/33/11 ಕೆ.ವಿ. ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ದರ್ಬೆ, ಪುತ್ತೂರು ಟೌನ್ ಓಲ್ಡ್ ಮತ್ತು ವಾಟರ್ ಸಪ್ಲೈ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು.ಈ ಹಿನ್ನೆಲೆಯಲ್ಲಿ ವಾಟರ್ ಸಪ್ಲೈ, ದರ್ಬೆ, ಕೆಎಸ್‌ಆರ್‌ಟಿಸಿ, ನೆಲ್ಲಿಕಟ್ಟೆ, ಕಲ್ಲಾರೆ, ಸಾಮೆತ್ತಡ್ಕ, ಹನುಮಾನ್ ಮಿಲ್, ಅಶ್ವಿನಿ ಸರ್ಕಲ್, ಐಬಿ, ಎಂ.ಟಿ. ರಸ್ತೆ, ಕೋರ್ಟ್ ರಸ್ತೆ, ಬೊಳ್ವಾರು, ಬೈಪಾಸ್, ಬೀರಮಲೆ, ಪರ್ಲಡ್ಕ ಹಾಗೂ ಮಿನಿ ವಿಧಾನಸೌಧ ಪರಿಸರದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









