ಪುತ್ತೂರು: ವಾಮಂಜೂರು ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ವಾಮಂಜೂರು ನಿವಾಸಿಯಾಗಿರುವ ಅಬ್ದುಲ್ ಲತೀಫ್ ರವರ ಮಗ ಹಾಗೂ ಮೂಲತಃ ಪುತ್ತೂರಿನ ಕಬಕ ಕುಳ ನಿವಾಸಿಯಾಗಿರುವ ಹಾಗೂ ಪ್ರಸ್ತುತ ಮುಡಿಪುವಿನಲ್ಲಿ ವಾಸವಾಗಿರು ಮೊಯ್ದೀನ್ ಅವರ ಮಗಳ ಗಂಡ ಆಶೀಕ್ ಅವರು ತೀವ್ರ ಜ್ವರದ ಕಾರಣದಿಂದ ಇಂದು (ನ. 12) ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನಲೆಯಲ್ಲಿ ಆಶಿಕ್ ಅವರನ್ನು ದೇರಳಕಟ್ಟೆಯ ಯೇನಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.














