ಪುತ್ತೂರು, ಜೂನ್ 18: ಇಲ್ಲಿನ ವಾಣಿ ಪ್ರಿಂಟರ್ಸ್‌ನ ಮಾಲಕರಾಗಿದ್ದ ದಿವಂಗತ ನಾರಾಯಣ ಮಣಿಯಾಣಿ ಅವರ ಪತ್ನಿ ಭಾಗೀರಥಿ (81) ಅವರು ಮಂಗಳವಾರ ತಡರಾತ್ರಿ ನಿಧನರಾದರು.
ಬೊಳುವಾರು ನಿವಾಸಿಯಾಗಿದ್ದ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 17ರ ರಾತ್ರಿ 12.15ಕ್ಕೆ ಕೊನೆಯುಸಿರೆಳೆದರು.
ಮೃತರು ಪುತ್ರರಾದ ಪತ್ರಕರ್ತ ಪ್ರವೀಣ್ ಹಾಗೂ ವಾಣಿ ಪ್ರಿಂಟರ್ಸ್ ಸಂಸ್ಥೆಯನ್ನು ಮುನ್ನಡೆಸುತ್ತಿರುವ ನೀಲಂತ್, ಪುತ್ರಿ ಬೆಂಗಳೂರಿನ ಡಾ. ವಾಣಿ, ಸೊಸೆಯರಾದ ಅಶ್ವಿನಿ ಪ್ರವೀಣ್ ಮತ್ತು ಜ್ಯೋತಿ ನೀಲಂತ್, ಅಳಿಯ ಅನಂತ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!