ಪುತ್ತೂರು: ದರ್ಬೆಯ ಬುಶ್ರಾ ಟವರ್‌ನಲ್ಲಿರುವ ನಯಾ ಚಪ್ಪಲ್ ಬಜಾರ್ ವತಿಯಿಂದ ಸ್ವಾತಂತ್ರೋತ್ಸವದ ಅಂಗವಾಗಿ 1ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ‘ಸ್ವಾತಂತ್ರೋತ್ಸವ ರಸಪ್ರಶ್ನೆ ಸ್ಪರ್ಧೆ–2026’ ಆಯೋಜಿಸಲಾಗಿದೆ.
‘ಕಲಿಯೋಣ, ಸ್ಪರ್ಧಿಸೋಣ, ದೇಶಪ್ರೇಮ ಮೆರೆಯೋಣ’ ಎಂಬ ಘೋಷವಾಕ್ಯದಡಿ ನಡೆಯುವ ಈ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳ ಜತೆಗೆ ಇನ್ನೂ ಏಳು ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಉತ್ತರ ಪತ್ರಿಕೆಗಳನ್ನು ಅಂಚೆ ಅಥವಾ ನೇರವಾಗಿ ಮಳಿಗೆಗೆ ಸಲ್ಲಿಸಬಹುದಾಗಿದ್ದು, ಆ.10ರ ಸಂಜೆ 6 ಗಂಟೆಯೊಳಗೆ ತಲುಪುವಂತೆ ಕಳುಹಿಸಬೇಕು. ಆ.15ರಂದು ಫಲಿತಾಂಶ ಪ್ರಕಟಿಸಿ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ.
ವಿದ್ಯಾರ್ಥಿಗಳು ಹೆಸರು, ತರಗತಿ, ಶಾಲೆಯ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಪ್ರಶ್ನೆ ಸಂಖ್ಯೆಗೆ ಅನುಗುಣವಾಗಿ ಉತ್ತರಗಳನ್ನು ಸ್ಪಷ್ಟವಾಗಿ ಬರೆಯಬೇಕು. ಒಬ್ಬ ವಿದ್ಯಾರ್ಥಿಯಿಂದ ಒಂದು ಉತ್ತರ ಪತ್ರಿಕೆಯನ್ನು ಮಾತ್ರ ಸ್ವೀಕರಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗೆ: ನಯಾ ಚಪ್ಪಲ್ ಬಜಾರ್, ಬುಶ್ರಾ ಟವರ್, ಮುಖ್ಯರಸ್ತೆ, ಪುತ್ತೂರು. ಮೊ.: 94481 23569.








