ಪುತ್ತೂರು: ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಗ್ರಾಹಕರಿಗಾಗಿ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ. ಸೆ. 12ರಿಂದ 14ರವರೆಗೆ ಮೂರು ದಿನಗಳ ಕಾಲ ಸೀಮಿತ ಅವಧಿಯ ಈ ಕೊಡುಗೆಗಳು ಲಭ್ಯವಿರಲಿವೆ.ಚಿನ್ನಾಭರಣಗಳ ವಿಎ (VA) ಶುಲ್ಕದ ಮೇಲೆ ಶೇ.30ರಷ್ಟು ಫ್ಲ್ಯಾಟ್ ರಿಯಾಯಿತಿ ಹಾಗೂ ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್‌ಗೆ ₹8,000 ರಿಯಾಯಿತಿ ಪಡೆಯಬಹುದಾಗಿದೆ.
ಗಣೇಶ ಚತುರ್ಥಿ ಪ್ರಯುಕ್ತ ವಿವಿಧ ವಿನ್ಯಾಸಗಳ ಚಿನ್ನ ಹಾಗೂ ವಜ್ರಾಭರಣಗಳನ್ನು ಪರಿಚಯಿಸಲಾಗಿದೆ.ಈ ವಿಶೇಷ ಕೊಡುಗೆಗಳು ಪುತ್ತೂರು, ಸುಳ್ಯ, ಮೂಡಬಿದಿರೆ, ಹಾಸನ ಹಾಗೂ ಕುಶಾಲನಗರ ಶಾಖೆಗಳಲ್ಲಿ ಲಭ್ಯವಿರಲಿವೆ.2027ರ ಆರಂಭದಲ್ಲಿ ಮಂಗಳೂರಿನಲ್ಲಿ ಬೃಹತ್ ಶೋರೂಂಮಂಗಳೂರಿನಲ್ಲಿ ನೂತನ ಹಾಗೂ ಬೃಹತ್ ಶೋರೂಂ ಆರಂಭಿಸಲು ಸಂಸ್ಥೆ ಸಿದ್ಧತೆ ನಡೆಸುತ್ತಿದ್ದು, 2027ರ ಆರಂಭದಲ್ಲಿ ನೂತನ ಶಾಖೆ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ. ಶುಭಾರಂಭದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.ಚಿನ್ನದ ನಾಣ್ಯ, ಚಿನ್ನದ ಗಟ್ಟಿ, ಚಿನ್ನಾಭರಣ ಸ್ಕೀಮ್, ಯೆಲ್ಲೋ ಟ್ಯಾಗ್ ಆಭರಣಗಳು ಹಾಗೂ ಇತರ ಯಾವುದೇ ಯೋಜನೆಗಳೊಂದಿಗೆ ಈ ರಿಯಾಯಿತಿಯನ್ನು ಸಂಯೋಜಿಸಲಾಗುವುದಿಲ್ಲ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.1957ರಿಂದ ಆಭರಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಪುತ್ತೂರು, ಸುಳ್ಯ, ಮೂಡಬಿದಿರೆ, ಹಾಸನ ಹಾಗೂ ಕುಶಾಲನಗರದಲ್ಲಿ ಶಾಖೆಗಳನ್ನು ಹೊಂದಿದೆ.











