ಮೀನು  ಆರೋಗ್ಯಕರ ಫುಡ್. ಇದರ ಸೇವನೆಯಿಂದ ಸಾಕಷ್ಟು ಬೆನಿಫಿಟ್ ಗಳಿದೆ. ಆದರೆ ಮೀನಿನ ಜೊತೆಗೆ ಕೆಲವು ಆಹಾರಗಳನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ಇದು ಕೇವಲ ಸಾಂಪ್ರದಾಯಿಕವಾಗಿ ಹೇಳಿರುವ ವಿಚಾರಲ್ಲ ಇದರ ಹಿಂದೆ ವಿಜ್ಞಾನ, ಆಯುರ್ವೇದ ಮತ್ತು ಅನುಭವದ ಪರಿಭಾಷೆಯಲ್ಲಿ ಕೂಡ ಹೇಳಲಾಗಿದೆ.

ಮೀನು ಮತ್ತು ಹಾಲು: ಮೀನನ್ನು ಹಾಲು ಮತ್ತು ಹಾಲು ಆಧಾರಿತ ಆಹಾರಗಳ ಜೊತೆಯಲ್ಲಿ ಸೇವಿಸುವುದನ್ನು ತ್ಯಜಿಸಬೇಕು ಎಂದು ಹೇಳಲಾಗುತ್ತದೆ. ಕಾರಣವೆಂದರೆ ಮೀನಿನಲ್ಲಿರುವ ಪ್ರೋಟೀನ್ ಮತ್ತು ಹಾಲಿನ ಕೊಬ್ಬು ಇವುಗಳು ಚರ್ಮದ ಅಲರ್ಜಿ ಅಥವಾ ಜೀರ್ಣಕ್ರಿಯೆಯ ಮೇಲೆ ಪ್ರಭಾವವನ್ನು ಉಂಟು ಮಾಡಬಹುದು.

ವಿವಿಧ ತರಕಾರಿಗಳು: ಕೆಲವೊಮ್ಮೆ ಮೀನಿನ ಜೊತೆಗೆ ಹಸಿರು ಮೆಣಸಿನಕಾಯಿ, ಕುಂಬಳಕಾಯಿ, ಬದನೆ ಇತ್ಯಾದಿಗಳೊಂದಿಗೆ ಬೇಯಿಸಲಾಗುತ್ತದೆ, ಇದು ಅಜೀರ್ಣಕ್ಕೆ ಕಾರಣವಾಗಬಹುದು. ಮೀನಿನೊಂದಿಗೆ ಮೊಸರು ತಿನ್ನುವುದನ್ನು ಸಹ ತಪ್ಪಿಸಬೇಕು. ಇದು ಶೀತ ಮತ್ತು ಜೀರ್ಣಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಸಹ ಉಂಟುಮಾಡಬಹುದು.

ಮೀನು ಮತ್ತು ಪಪ್ಪಾಯಿ: ಪಪ್ಪಾಯಿಯಂತಹ ತಂಪು ಹಣ್ಣುಗಳು, ಕಿತ್ತಳೆಯಂತಹ ಹುಳಿ ಹಣ್ಣುಗಳು ಮತ್ತು ಮೀನು ಜೊತೆಯಾಗಿ ಸೇವಿಸುವುದು ಕೂಡ ದೇಹಕ್ಕೆ ಒಳ್ಳೆಯದಲ್ಲ. ಕೆಲವರಿಗೆ ಇದರಿಂದ ಅತಿಸಾರ ಅಥವಾ ಅಲರ್ಜಿಯಂತಹ ಸಮಸ್ಯೆಗಳು ಉಂಟಾಗುತ್ತದೆ

ಆವಕಾಡೊಗಳು ಮತ್ತು ಮೀನು: ಅವಕಾಡೋ ಹಾಗೂ ಮೀನು ಒಟ್ಟಿಗೆ ಸೇವಿಸುವುದರಿಂದ ಸರಿಯಾಗಿ ಜೀರ್ಣವಾಗುವುದಿಲ್ಲ. ಮೀನಿನಲ್ಲಿರುವ ಪ್ರೋಟೀನ್ ಮತ್ತು ಕೆಲವು ಲವಣಗಳು ಇತರ ಆಹಾರಗಳಲ್ಲಿನ ಖನಿಜಗಳು ಹೊಂದಿಕೆಯಾಗುವುದಿಲ್ಲ, ಇದು ತ್ವರಿತ ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಮೀನಿನ ಆಹಾರವನ್ನು ಸೇವಿಸುವಾಗ ಸುಲಭವಾಗಿ ಜೀರ್ಣವಾಗುವ ಆಹಾರಗಳಾದ ಅನ್ನ, ತರಕಾರಿಗಳನ್ನು ಸೇವಿಸುವುದು ದೇಹಕ್ಕೆ ಒಳ್ಳೆಯದು.

Leave a Reply

Your email address will not be published. Required fields are marked *

Join WhatsApp Group
error: Content is protected !!