
ಪುತ್ತೂರು :ಮುಕ್ವೆ ರಹ್ಮಾನಿಯಾ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಮುಕ್ವೆ ಸಮೀಪದ ನೆರಿಗೇರಿ ನಿವಾಸಿ ಅಬ್ದುಲ್ ಕರೀಮ್ ಸಾಹೇಬ್(95 ವ ) ರವರು ಅಲ್ಪ ಕಾಲದ ಅಸೌಖ್ಯದಿಂದ ನೆರಿಗೇರಿ ಮನೆಯಲ್ಲಿ ಡಿ 08 ರಂದು ನಿಧನರಾದರು.ಮೃತರು ಪತ್ನಿ ಹಾಗೂ ಪುತ್ತೂರಿನ ಕಲ್ಲೇಗ ಸಮೀಪದ ಮುರ ಶಾಂತಿನಗರ ದಾರುಲ್ ಹುದಾ ರಹ್ಮಾನಿಯಾ ಹಿಫ್ಲುಲ್ ಖುರ್ಅನ್ ಕಾಲೇಜು ಮತ್ತು ಸಹದಿಯಾ ಮದ್ರಸದ ಸದರ್ ಉಸ್ತಾದ್ ಬಹುಃ ಹಾಜಿಃ ಅಬ್ದುಲ್ ಹಮೀದ್ ಹನೀಫೀ ಉಸ್ತಾದ್, ಅದಮ್ ಸಾಹೇಬ್, N.A ಮಿನಿ ಮಾರ್ಟ್ ಮಾಲಕ ಉಸ್ಮಾನ್ ಸಾಹೇಬ್, ಮುಕ್ವೆಯ ರೈನ್ ಬೊ ಹೋಟೆಲ್ ಮಾಲಕ ಅಬ್ದುಲ್ ಲತೀಫ್ ಸಾಹೇಬ್, ದುಬೈ ಉದ್ಯೋಗಿ ಅಬ್ದುಲ್ ಸಲೀಂ ಸಾಹೇಬ್, ಅಬ್ದುಲ್ ರಶೀದ್ ಸಾಹೇಬ್ ಮತ್ತು ಏಳು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಇಂದು (ಡಿ. O8) ಮಗ್ರಿಬ್ ನಮಾಝ್ ಸಮಯದಲ್ಲಿ ಮಯ್ಯತ್ ದಫನ ಕಾರ್ಯ ಮುಕ್ವೆ ರಹ್ಮಾನಿಯಾ ಮಸೀದಿಯ ಅವರಣದಲ್ಲಿ ನಡೆಯಲಿದೆ ಎಂದು ಕುಟುಂಸ್ಥರು ತಿಳಿಸಿದ್ದಾರೆ.






