
ತನ್ನ ಕಚೇರಿಯ 20 ವರ್ಷದ ಯುವತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾದ ಜಿಎಚ್‌ಎಂಸಿ (Greater Hyderabad Municipal Corporation) ಜಂಟಿ ಆಯುಕ್ತನನ್ನು ಅವನ ಪತ್ನಿಯೇ ರೆಡ್ ಹ್ಯಾಂಡ್ ಆಗಿ ಹಿಡಿದು ಸಖತ್ ಗೂಸಾ ಕೊಟ್ಟಿರುವ ಘಟನೆ ವರಸಿಗುಡದಲ್ಲಿ ನಡೆದಿದೆ.
ಜಾನಕಿರಾಮ್ ಎಂಬುವವರು ತನಗಿಂತ 20 ವರ್ಷ ಚಿಕ್ಕ ವಯಸ್ಸಿನ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಪತ್ನಿ ಮತ್ತಾಕೆಯ ಕುಟುಂಬಸ್ಥರು ಆರೋಪಿಸಿದ್ದು, ಇಂದು ಚಕ್ಕಂದವಾಡುವಾಲೇ ಜಾನಕಿರಾಮ್ ನ ಪತ್ನಿ ಮತ್ತವರ ಕುಟುಂಬಸ್ಥರು ಹಿಡಿದು ಇಬ್ಬರನ್ನೂ ಥಳಿಸಿದ್ದಾರೆ.
ಜಾನಕಿರಾಮ್ ಕಳೆದ ಕೆಲವು ದಿನಗಳಿಂದ ವಾರಸಿಗುಡದಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಯುವತಿಯೊಂದಿಗೆ ವಾಸಿಸುತ್ತಿದ್ದ ಎಂದು ಹೇಳಲಾಗುತ್ತಿದ್ದು, ಹಲವು ದಿನಗಳಿಂದ ಮನೆಗೆ ಬಾರದ ಗಂಡನ ಮೇಲೆ ಪತ್ನಿ ಕಣ್ಣಿಟ್ಟಿದ್ದಳು. ಹೀಗಾಗಿ ಇಂದು ಗಂಡ ಯುವತಿಯೊಂದಿಗೆ ವಾಸಿಸುವ ಸ್ಥಳಕ್ಕೇ ಪತ್ನಿ ಕಲ್ಯಾಣಿ ತೆರಳಿ ಗ್ರಹಚಾರ ಬಿಡಿಸಿದ್ದಾರೆ.
ಸ್ಥಳಕ್ಕೆ ವರಸಿಗುಡ ಪೊಲೀಸರು ಭೇಟಿ ನೀಡಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಸದ್ಯ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
