Author: Vidyamaana

ಇಂದಿನಿಂದ (ಜು.8) ಗಡಾಯಿಕಲ್ಲು ಚಾರಣ ನಿಷೇಧ

ಬೆಳ್ತಂಗಡಿ: ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಜು. 8ರಿಂದ ಗಡಾಯಿಕಲ್ಲು ಚಾರಣಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ ಎಂದು ಬೆಳ್ತಂಗಡಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಪ್ರಕಟನೆ ತಿಳಿಸಿದೆ.ನಿರಂತರ ಮಳೆಯಿಂದಾಗಿ ಗಡಾಯಿಕಲ್ಲು ಚಾರಣ…

ಪುತ್ತೂರು -ಜು.8: ರೆಡ್ ಅಲರ್ಟ್ ಹಿನ್ನೆಲೆ: ಶಾಲೆಗಳಿಗೆ ರಜೆ

ಮಂಗಳೂರು: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ.ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯೂ ಆಗಿರುವ…

ಭಾರೀ ಗಾಳಿ-ಮಳೆಗೆ ಉರುಳಿದ ಬೃಹತ್ ಮರ; ತಪ್ಪಿದ ಅನಾಹುತ

ಪುತ್ತೂರು: ಮಂಗಳವಾರ (ಜು. 7) ಸುರಿದ ಭಾರೀ ಗಾಳಿ-ಮಳೆಯ ಪರಿಣಾಮ ನಗರದ ಎಲ್ಮುಡಿ ಪ್ರದೇಶದಲ್ಲಿರುವ ಯೆಲ್ತಿಮಾರ್ ಟ್ರೇಡರ್ಸ್ ಎದುರು, ಹಿಮಾ ರೆಫ್ರಿಜರೇಟರ್ಸ್ ಮಾಲೀಕರಾದ ರಾಜೇಶ್ ಅವರ ಮನೆಯ ಕಾಂಪೌಂಡ್ ಬದಿಯಲ್ಲಿದ್ದ ಬೃಹತ್ ಮರ ಉರುಳಿ ಬಿದ್ದಿದೆ.ಮರ ಉರುಳಿದ ಪರಿಣಾಮ ವಿದ್ಯುತ್ ತಂತಿಗಳು…

‘ಭಾರತದ ಸೇತುವೆ ಮನುಷ್ಯ’ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ನಿಧನ

ಸುಳ್ಯ, ಜು. 7: ದೇಶಾದ್ಯಂತ ‘ಭಾರತದ ಸೇತುವೆ ಮನುಷ್ಯ’ (Bridge Man of India) ಹಾಗೂ ‘ತೂಗು ಸೇತುವೆಗಳ ಸರದಾರ’ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ಮಂಗಳವಾರ ಮುಂಜಾನೆ ನಿಧನರಾದರು.ಕೆಲ ದಿನಗಳ ಹಿಂದೆ ಉತ್ತರಾಖಂಡದ…

ಪುತ್ತೂರು: ಯುವಕ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು ತಾಲೂಕಿನ ಇರ್ದೆ ಗ್ರಾಮದಲ್ಲಿ 18 ವರ್ಷದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು. 6ರಂದು ನಡೆದಿದೆ.ಇರ್ದೆ ಗ್ರಾಮದ ಮಣ್ಣಾಪು ನಿವಾಸಿ ಗಂಗಾಧರ ಮಡಿವಾಳ ಅವರ ಪುತ್ರ ತಿಲಕ್ (18) ಮೃತ ಯುವಕ. ಅವರು ಮಧ್ಯಾಹ್ನ ತಮ್ಮ ಮನೆಯ…

ಪುತ್ತೂರು ಬಿಜೆಪಿ ವಕ್ತಾರರಾಗಿ ರಾಜೇಶ್ ಬನ್ನೂರು, ಮಾಧ್ಯಮ ಪ್ರಮುಖರಾಗಿ ಸತೀಶ್ ನಾಯಕ್

ಪುತ್ತೂರು ಜು. 4: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಸಂಘಟನೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಕ್ಷೇತ್ರದ ವಕ್ತಾರರಾಗಿ ರಾಜೇಶ್ ಬನ್ನೂರು ಹಾಗೂ ಮಾಧ್ಯಮ ಪ್ರಮುಖರಾಗಿ ಸತೀಶ್ ನಾಯಕ್ ಪರ್ಲಡ್ಕ ಅವರನ್ನು ನೇಮಕ ಮಾಡಲಾಗಿದೆ.ಈ ಕುರಿತು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ…

ಪುತ್ತೂರಿನಲ್ಲಿ ಮೂರನೇ ವರ್ಷದ ವರಮಹಾಲಕ್ಷ್ಮಿ ಪೂಜೆಗೆ ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಹಾಗೂ ವರಮಹಾಲಕ್ಷ್ಮಿ ಪೂಜಾ ಸಮಿತಿ ವತಿಯಿಂದ ಆಯೋಜಿಸಲಾಗಿರುವ ಮೂರನೇ ವರ್ಷದ ವರಮಹಾಲಕ್ಷ್ಮಿ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಮುಕ್ರಂಪಾಡಿಯ ಸುಭದ್ರಾ ಕಲಾಮಂದಿರದಲ್ಲಿ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್‌ನ…

ಕಡಬ:ಬ್ಯಾಂಕ್‌ಗೆ ನಕಲಿ ತೂಕದ ಚಿನ್ನ ಅಡವಿಟ್ಟು ಮೋಸಕ್ಕೆ ಯತ್ನ; ಇಬ್ಬರ ಬಂಧನ..!!

ಕಡಬ: ಬ್ಯಾಂಕ್‌ನಲ್ಲಿ ಹೆಚ್ಚು ತೂಕವಿರುವಂತೆ ತಯಾರಿಸಿದ ಚಿನ್ನಾಭರಣಗಳನ್ನು ಅಡವಿಟ್ಟು ಹಣ ಪಡೆದು ಮೋಸ ಮಾಡಲು ಯತ್ನಿಸಿದ ಆರೋಪದ ಮೇಲೆ ಕಡಬ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಜುಲೈ 3ರಂದು ಸಂಜೆ ಕಡಬ ಪೇಟೆಯಲ್ಲಿ ಇಬ್ಬರು ವ್ಯಕ್ತಿಗಳು ಸಂಶಯಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು…

ಜು. 8: ಪುತ್ತೂರಿನ ಚೇತನಾ ಆಸ್ಪತ್ರೆಯಲ್ಲಿ “ಉಚಿತ” ಲಿಪಿಡ್ ಪ್ರೊಫೈಲ್ ತಪಾಸಣಾ ಶಿಬಿರ..!!

ಪುತ್ತೂರು: ಹೃದಯ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪುತ್ತೂರಿನ ಚೇತನಾ ಆಸ್ಪತ್ರೆಯಲ್ಲಿ ಜುಲೈ 8ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಉಚಿತ ಲಿಪಿಡ್ ಪ್ರೊಫೈಲ್ (Lipid Profile) ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.ಲಿಪಿಡ್ ಪ್ರೊಫೈಲ್ ಎಂದರೇನು?ಲಿಪಿಡ್ ಪ್ರೊಫೈಲ್ ಎನ್ನುವುದು…

ಪುತ್ತೂರು: ಭಾರೀ ಮಳೆಗೆ ಸರ್ಕಾರಿ ಶಾಲೆಯ ಆವರಣ ಗೋಡೆ ಕುಸಿತ..!!

ಪುತ್ತೂರು: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ, ಗಿಟ್ಟರ್ಸ್ ಫ್ಯಾನ್ಸಿ ಎದುರು ರಿಕ್ಷಾ ಪಾರ್ಕಿಂಗ್ ಪಕ್ಕದಲ್ಲಿರುವ ಡಾ. ಕೆ. ಶಿವರಾಮ ಕಾರಂತ ಸರ್ಕಾರಿ ಪ್ರೌಢಶಾಲೆಯ ಆವರಣ ಗೋಡೆ ಭಾನುವಾರ ರಾತ್ರಿ ಸುರಿದ ಭಾರೀ ಮಳೆಯ ಪರಿಣಾಮ ಕುಸಿದು ಬಿದ್ದಿದೆ.ಕೆಲ ದಿನಗಳ ಹಿಂದೆಯೇ…

Join WhatsApp Group
error: Content is protected !!