ಬೆಂಗಳೂರು: ಪ್ರೇಯಸಿಗೆ ಬೇರೊಬ್ಬರೊಂದಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಆಕೆಯ ಪುತ್ರನನ್ನು ಚಾಕು ಹಾಗೂ ಸುತ್ತಿಗೆಯಿಂದ ಹಲ್ಲೆ ನಡೆಸಿ ಕೊಲೆಗೈದು, ಬಳಿಕ ಪ್ರೇಯಸಿಗೂ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಮೂಲದ ಸೋಹಮ್ ದಾಸ್ (18) ಕೊಲೆಯಾದ ಯುವಕ. ಆತನ ತಾಯಿ ಸೀಮಾ (43) ಹಲ್ಲೆಗೊಳಗಾಗಿದ್ದು, ಮೈಸೂರು ಮೂಲದ ಸುದೀಪ್ (44) ಬಂಧಿತ ಆರೋಪಿ.
ಪ್ರೀತಿ, ಸಹಬಾಳ್ವೆ ಬಳಿಕ ಅನುಮಾನ
ಸೀಮಾ ದಾಸ್ ಬೆಂಗಳೂರಿನ ಖಾಸಗಿ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದು, ಕೆಲವು ವರ್ಷಗಳ ಹಿಂದೆ ಪಶ್ಚಿಮ ಬಂಗಾಳ ಮೂಲದ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಸೋಹಮ್ ದಾಸ್ ಎಂಬ ಪುತ್ರನಿದ್ದ. ಆದರೆ, ವಿವಾಹವಾದ ಕೆಲವೇ ವರ್ಷಗಳಲ್ಲಿ ದಂಪತಿ ಪ್ರತ್ಯೇಕಗೊಂಡಿದ್ದರು. ಬಳಿಕ ತಾಯಿ ಮತ್ತು ಪುತ್ರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಕೂಡಲೇ ಕೊಠಡಿಯ ಬಾಗಿಲು ತೆರೆದು ನೋಡಿದಾಗ ಗಾಯಗೊಂಡ ಸ್ಥಿತಿಯಲ್ಲಿ ಸೀಮಾ ಪತ್ತೆಯಾಗಿದ್ದಾರೆ. ಮತ್ತೊಂದೆಡೆ, ಸ್ನಾನದ ಕೋಣೆಯಲ್ಲಿ ಸೋಹಮ್ ದಾಸ್ ಅವರ ಮೃತದೇಹ ಪತ್ತೆಯಾಗಿದೆ.
ಮೂರು ದಿನ ಆಹಾರವಿಲ್ಲದೆ ಸಾವು-ಬದುಕಿನ ನಡುವೆ ಹೋರಾಟ
ಸೀಮಾ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬಳಿಕ ಆರೋಪಿ ಅವರನ್ನು ಬೆಡ್‌ರೂಮ್‌ನಲ್ಲಿ ಕೂಡಿ ಹಾಕಿದ್ದ. ಫ್ಲ್ಯಾಟ್‌ನ ಎಲ್ಲ ಬಾಗಿಲುಗಳಿಗೆ ಬೀಗ ಹಾಕಿ, ಹೊರಭಾಗದ ಗ್ರಿಲ್‌ಗೂ ಬೀಗ ಜಡಿದು ಪರಾರಿಯಾಗಿದ್ದ.
ತೀವ್ರ ಗಾಯಗೊಂಡಿದ್ದ ಸೀಮಾ ಮೂರು ದಿನಗಳ ಕಾಲ ಆಹಾರವಿಲ್ಲದೆ ಒಂದೇ ಕೊಠಡಿಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿದ್ದರು. ಮೂರು ದಿನಗಳ ಬಳಿಕ ಪೊಲೀಸರು ಅವರನ್ನು ಪತ್ತೆಹಚ್ಚಿದ್ದು, ಬದುಕುಳಿದಿರುವುದು ಅಚ್ಚರಿ ಮೂಡಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.









