
ಪೋಪ್ ಫ್ರಾನ್ಸಿಸ್ ನಿಧನದಿಂದ ಇಡೀ ಜಗತ್ತು ಶೋಕಸಾಗರದಲ್ಲಿ ಮುಳುಗಿದೆ. ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಧಾರ್ಮಿಕ ವಿಧಿವಿಧಾನ ಆರಂಭವಾಗಿದೆ.
ಇದೀಗ ಪಾರ್ಥಿವ ಶರೀರದ ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದ್ದು, ಪೋಪ್ ಕಾಸಾ ಸಾಂಟಾ ಮಾರ್ಟಾದ ಪ್ರಾರ್ಥನಾ ಮಂದಿರದಲ್ಲಿ ಚಿರನಿದ್ರೆಯಲ್ಲಿದ್ದಾರೆ.
ಪೋಪ್ ಗೆ ಸ್ವಿಸ್ ಗಾರ್ಡ್ ಗಳು ಭದ್ರತೆ ನೀಡಿದ್ದಾರೆ. ಇಡೀ ವ್ಯಾಟಿಕನ್ ಸಿಟಿ ಶೋಕ ಸಾಗರದಲ್ಲಿ ಮುಳುಗಿದ್ದು, ಎಲ್ಲರೂ ಭಕ್ತಿಭಾವದಿಂದ ಅಂತಿಮ ದರ್ಶನ ಪಡೆದಿದ್ದಾರೆ.
ಸಾಂಪ್ರದಾಯಿಕ ಉಡುಪಿನಲ್ಲೇ ಪೋಪ್ ರನ್ನು ಇಡಲಾಗಿದೆ. ಕ್ಯಾಥೊಲಿಕ್ ಧರ್ಮದ ಆಚರಣೆಯಂತೆ ಅಂತಿಮ ವಿಧಿವಿಧಾನ ನೆರವೇರಲಿದೆ. ರೋಮ್ ನಲ್ಲಿ ನಡೆಯುವ ಪೋಪ್ ಫ್ರಾನ್ಸಿಸ್ ಅಂತ್ಯಸಂಸ್ಕಾರದಲ್ಲಿ ಜಗತ್ತಿನ ಅಗ್ರಗಣ್ಯ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ.






