
ಮೊದಲ ಬಾರಿಗೆ ಸೌದಿ ಅರೇಬಿಯಾಗೆ ತೆರಳಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಇಂದು (ಏ.22) ಪೂರ್ಣ ಪ್ರಮಾಣದ ಗೌರವ ಮತ್ತು ಭದ್ರತೆ ನೀಡಲಾಗಿದೆ. ಮೋದಿ ಜೆಡ್ಡಾ ತಲುಪಿದ ವೇಕೆ ಅದ್ಧೂರಿ ಸ್ವಾಗತ ದೊರೆತಿದ್ದು, 21 ಗನ್ ಸಲ್ಯೂಟ್ನ ಮೂಲಕ ಸ್ವಾಗತಿಸಲಾಗಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿಗೆ ಅಲ್ಲಿಯ ಮೂರು ಯುದ್ಧ ವಿಮಾನಗಳು ಸ್ವಾಗತ ಮಾಡಿವೆ. ನರೇಂದ್ರ ಮೋದಿ ಪ್ರಯಾಣಿಸುತ್ತಿದ್ದ ವಿಮಾನ ಜಿದ್ದಾ ಮೂಲಕ ಸೌದಿ ವಾಯುಭಾಗವನ್ನು ಪ್ರವೇಶಿಸುತ್ತಿದ್ದಂತೆಯೇ ಎಫ್-15 ಫೈಟರ್‌ಜೆಟ್‌ಗಳೂ ಜೊತೆಗೆ ಬಂದಿವೆ.
ಭಾರತ ಮತ್ತು ಸೌದಿ ರಾಷ್ಟ್ರದ ನಡುವೆ ಒಟ್ಟು ಆರು ಒಪ್ಪಂದಗಳು ನಡೆದಿದೆ. 40 ವರ್ಷದ ನಂತರ ಭಾರತದ ಪ್ರಧಾನಿ ಸೌದಿ ಯ ಜಿದ್ದಾ ಗೆ ಭೇಟಿ ನೀಡಿದರು.






