ಭಾರತ ಸತತವಾಗಿ ನೀಡುತ್ತಿರುವ ಹೊಡೆತಕ್ಕೆ ಪಾಕಿಸ್ತಾನ ಪತರುಗುಟ್ಟಿ ಹೋಗಿದೆ. ಶನಿವಾರವೂ ಸಹ ಪಾಕಿಸ್ಥಾನದ ಏರ್ ಬೇಸ್ ಗಳನ್ನು ಭಾರತ ಪುಡಿಗಟ್ಟಿವೆ. ಈ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್‌ ಮಹತ್ವ ನಿರ್ಣಯಕ್ಕೆ ಮುಂದಾಗುವ ಸೂಚನೆ ನೀಡಿದ್ದು, ರಾಷ್ಟ್ರೀಯ ಅಣುಶಕ್ತಿ ಮಂಡಳಿಯೊಂದಿಗೆ ತುರ್ತು ಸಭೆ ನಡೆಸಿದ್ದಾರೆ.

ಈ ಮಂಡಳಿಯು ಅಣುಬಾಂಬ್‌ ಸೇರಿದಂತೆ ಇಡೀ ದೇಶದ ಎಲ್ಲಾ ಅಣುಶಕ್ತಿ, ರಾಷ್ಟ್ರೀಯ ಸುರಕ್ಷತೆ ಹಾಗೂ ಅಣು ವಿಪತ್ತನ್ನು ನಿರ್ವಹಿಸುತ್ತದೆ.

ಭಾರತದ ತೀವ್ರ ಹೊಡೆತವನ್ನು ತಾಳಲಾರದೇ ಯುದ್ಧವನ್ನು ಬೇಗ ಮುಗಿಸಲು ಪಾಕ್‌ ಮುಂದಾಗಿದೆ. ಪದೇ ಪದೇ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಶಾಂತಿ ಮಂತ್ರ ಜಪಿಸುತ್ತಾ ಗೋಳಾಡುತ್ತಿರುವುದಲ್ಲದೇ ಮಧ್ಯಸ್ತಿಕೆ ವಹಿಸಲು ವಿಶ್ವಸಂಸ್ಥೆ ಹಾಗೂ ಅಮೆರಿಕಕ್ಕೂ ಮೊರೆಯಿಟ್ಟಿದೆ. ಆದರೆ ಎಲ್ಲಿಂದಲೂ ಸಹ ನೆರವು ಬರದೆ ಕಂಗಾಲಾಗಿದೆ.

ಇದೇ ವೇಳೆ, ಭಾರತ-ಪಾಕಿಸ್ತಾನ ಸಂಘರ್ಷವನ್ನು ತಡೆಯಲು ಬಯಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಯುಎಸ್ ಸ್ಟೇಟ್ ಸೆಕ್ರೆಟರಿ ಇಂಡಿಯಾ ಮತ್ತು ಪಾಕಿಸ್ತಾನದ ಜೊತೆ ಸಂಪರ್ಕದಲ್ಲಿದ್ದಾರೆಂದು ವೈಟ್ ಹೌಸ್ ತಿಳಿಸಿದೆ. ಪಾಕಿಸ್ತಾನ ಪ್ರಧಾನಿಯ ಜೊತೆ ಸೌದಿ ವಿದೇಶಾಂಗ ಮಂತ್ರಿ ಮಾತುಕತೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!