ಧಾರಾವಾಹಿಗಳು ಭಾರತದಲ್ಲಿ ಸಿನಿಮಾಗಳಿಗಿಂತಲೂ ಜನಪ್ರಿಯವಾಗಿದ್ದ ಕಾಲ ಒಂದಿತ್ತು. ಮಹಾಭಾರತ, ರಾಮಾಯಣ, ಓಂ ನಮಃ ಶಿವಾಯ, ಅಲಿಫ್ ಲೈಲಾ, ಶಕ್ತಿಮಾನ್, ಇನ್ನೂ ಕೆಲ ಧಾರಾವಾಹಿಗಳು ಜನಮಾನಸದಲ್ಲಿ ಸೇರಿದ್ದವು. ಅವುಗಳಷ್ಟೇ ‘ಕ್ಯೂಂಕಿ ಸಾಸ್ ಬಿ ಕಭಿ ಬಹು ಥೀ’ ಎಂಬ ಕೌಟುಂಬಿಕ ಧಾರಾವಾಹಿ ಜನಪ್ರಿಯವಾಗಿತ್ತು.

ಮಾಜಿ ಕೇಂದ್ರ ಸಚಿವೆ, ಬಿಜೆಪಿಯ ರಾಷ್ಟ್ರೀಯ ನಾಯಕಿಯಾಗಿ ಗುರುತಿಸಿಕೊಂಡಿರುವ ಸ್ಮೃತಿ ಇರಾನಿಯ ಈ ಧಾರಾವಾಹಿ ಪ್ರತಿ ಮನೆಯಲ್ಲಿಯೂ ಪ್ರಸಾರವಾಗುತ್ತಿತ್ತು. ಇದೀಗ ಈ ಧಾರಾವಾಹಿಯ ಎರಡನೇ ಸೀಸನ್ ಆರಂಭವಾಗಿದೆ.

ಮೊದಲ ಬಾರಿ 2000ರಲ್ಲಿ ‘ಕ್ಯೂಂಕಿ ಸಾಸ್ ಬಿ ಕಭಿ ಬಹು ಥೀ’ ಧಾರಾವಾಹಿ ಪ್ರಸಾರವಾಗಿತ್ತು. ಧಾರಾವಾಹಿಯ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ಸ್ಮೃತಿ ಇರಾನಿಗೆ ಆಗ ಸುಮಾರು 25 ವರ್ಷ ವಯಸ್ಸು. ಧಾರಾವಾಹಿಯಲ್ಲಿ ಸೊಸೆ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಸೊಸೆ ತುಳಸಿಯ ಪಾತ್ರದಲ್ಲಿ ನಟಿಸಿದ್ದರು. ಬರೋಬ್ಬರಿ ಎಂಟು ವರ್ಷಗಳಿಗೂ ಹೆಚ್ಚು ಕಾಲ ಆಗ ಈ ಧಾರಾವಾಹಿ ಪ್ರಸಾರವಾಗಿತ್ತು. ಧಾರಾವಾಹಿಯ ಕತೆಯಲ್ಲಿ ಮೂರು ಜನರೇಷನ್ನ ಕತೆಯನ್ನು ಹೇಳಲಾಗಿತ್ತು. ಇದೀಗ ಈ ಧಾರಾವಾಹಿಯ ಎರಡನೇ ಸೀಸನ್ ಚಿತ್ರೀಕರಣ ಪ್ರಾರಂಭವಾಗಿದ್ದು, ಹಲವಾರು ವರ್ಷಗಳ ಬಳಿಕ ಸ್ಮೃತಿ ಇರಾನಿಯವರು ಮತ್ತೆ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳಲಿದ್ದಾರೆ.

2013ರಲ್ಲಿ ಕೊನೆಯ ಬಾರಿಗೆ ಸ್ಮೃತಿ ಇರಾನಿ ಧಾರಾವಾಹಿಯೊಂದರಲ್ಲಿ ನಟಿಸಿದ್ದರು. ಬಳಿಕ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾದರು. ರಾಜಕೀಯದಲ್ಲಿಯೂ ಗೆಲುವಿನ ಮೇಲೆ ಗೆಲುವು, ಯಶಸ್ಸು ದಕ್ಕುತ್ತಾ ಸಾಗಿ ಎರಡು ಅವಧಿಗೆ ಕೇಂದ್ರ ಮಂತ್ರಿಯೂ ಆದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಿಂದ ಸ್ಪರ್ಧಿಸಿ ಸೋತಿರುವ ಸ್ಮೃತಿ ಇರಾನಿ ಇದೀಗ ತಮಗೆ ಜನಪ್ರಿಯತೆ ತಂದು ಕೊಟ್ಟ ಅದೇ ಟಿವಿ ಲೋಕಕ್ಕೆ ಮರಳಿದ್ದಾರೆ.

ಮೊದಲ ‘ಕ್ಯೂಂಕಿ ಸಾಸ್ ಬಿ ಕಭಿ ಬಹು ಥೀ’ ಧಾರಾವಾಹಿ ನಿರ್ಮಾಣ ಮಾಡಿದ್ದ ಏಕ್ತಾ ಕಪೂರ್ ಅವರೇ ಎರಡನೇ ಸೀಸನ್ ನಿರ್ಮಿಸುತ್ತಿದ್ದಾರೆ. ಎರಡನೇ ಸೀಸನ್ ಭಿನ್ನವಾಗಿರಲಿದ್ದು, ಚಿತ್ರೀಕರಣದಲ್ಲಿಯೂ ಸಹ ಭಾರಿ ನಿಯಮಗಳನ್ನು ಹೇರಲಾಗಿದೆ. ಚಿತ್ರೀಕರಣ ಸ್ಥಳದಲ್ಲಿ ಮೊಬೈಲ್ ಬಳಕೆಗೆ ಅವಕಾಶ ಇಲ್ಲ. ಸ್ಮೃತಿ ಇರಾನಿಯವರಿಗೆ ಚಿತ್ರೀಕರಣದ ಸಮಯದಲ್ಲಿ ಜೆಡ್ ಕ್ಯಾಟಗರಿ ಭದ್ರತೆ ವ್ಯವಸ್ಥೆ ನೀಡಲಾಗುತ್ತದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!