
ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿಗಳ ನೇತೃತ್ವದಲ್ಲಿ ವನಮಹೋತ್ಸವ – ಅರಣ್ಯ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ವಂದನೀಯ ಭಗಿನಿ ವೆನಿಶಾ ಬಿ.ಎಸ್. ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಲಯದ ಅರಣ್ಯ ಸಂಚಾರಿ ದಳದ ಅರಣ್ಯಧಿಕಾರಿ ಶ್ರೀ ಸಂತೋಷ ಕುಮಾರ್ ರೈ ಕೆ ಮಾತನಾಡಿ, “ಪ್ರಕೃತಿಯೆ ಈ ಜಗತ್ತಿನ ಅತಿ ದೊಡ್ಡ ಆಶ್ಚರ್ಯ. ನಾವದು ಕುರಿತಾಗಿ ಅಧ್ಯಯನ ಮಾಡಿದಷ್ಟೂ ಅದರ ಒಳಹುಳುಮನಸ್ಸು ಅರಿಯಲು ಸಾಧ್ಯವಿಲ್ಲ. ಪ್ರಕೃತಿಯ ಮೇಲೆ ಮಾನವೀಯ ಚಲನೆ ಕಡಿಮೆ ಮಾಡಿ ನೈಜ ಸ್ಥಿತಿಯಲ್ಲಿ ಇರಲು ಬಿಡಿ,” ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ವಿನಯ ಸುವರ್ಣ, ಸುರಕ್ಷಾ ಸಮಿತಿಯ ಅಧ್ಯಕ್ಷ ಚೇತನ್, ಹಿರಿಯ ಶಿಕ್ಷಕಿ ಹಾಗೂ ಗೈಡ್ ಕ್ಯಾಪ್ಟನ್ ವಿಲ್ಮಾ ಫೆರ್ನಾಂಡಿಸ್ ಮತ್ತು ಸ್ಕೌಟ್ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ನಳಿನಾಕ್ಷಿ ಸ್ವಾಗತಿಸಿ, ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಸುಮಾರು 500 ಕ್ಕೂ ಅಧಿಕ ಸ್ಕೌಟ್, ಗೈಡ್, ಕಬ್ ಹಾಗೂ ಬುಲ್ ಬುಲ್ ಮಕ್ಕಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು.







