
ಪುತ್ತೂರು ಜೂನ್ 21: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಇದರ ಎನ್.ಸಿ.ಸಿ. ಆರ್ಮಿ ಮತ್ತು ನೇವಿ
ಘಟಕಗಳು, ಎನ್.ಎಸ್.ಎಸ್. ಘಟಕಗಳು, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಎನ್.ಸಿ.ಸಿ. ಘಟಕಗಳು
ಮತ್ತು ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಎನ್.ಸಿ.ಸಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ "ಒಂದು
ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ" ಎಂಬ ಧ್ಯೇಯವಾಕ್ಯವನ್ನು ಆಧರಿಸಿ ಸಂತ ಫಿಲೋಮಿನಾ ಅನುದಾನಿತ
ಪ್ರೌಢಶಾಲೆಯ ಸಭಾಭವನದಲ್ಲಿ ಹನ್ನೊಂದನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆ (ಯೋಗ ಸಂಗಮ)ಯನ್ನು
ಆಚರಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತಿ ವಂ| ಲಾರೆನ್ಸ್
ಮಸ್ಕರೇನ್ಹಸ್ ರವರು ಯೋಗ ದಿನಾಚರಣೆಯನ್ನು ದೀಪ ಪ್ರಜ್ವಲಿಸುವ ಮೂಲಕ ಚಾಲನೆಯನ್ನು ನೀಡಿ ಜೀವನ
ಎನ್ನುವಂತದ್ದು ದೇವರ ದೊಡ್ಡ ಕೊಡುಗೆ. ಬದುಕು ಸಾರ್ಥಕವಾಗಬೇಕಾದರೆ ಯೋಗ ಅತ್ಯಗತ್ಯ. ಸಂತೋಷ
ಎಂಬುದು ನಮ್ಮ ಹೃದಯ ಮತ್ತು ಆತ್ಮದಲ್ಲಿ ಇರುವಂತದ್ದು. ದೇವರ ಜೊತೆಗೆ ಸದಾ ಸಂಬಂಧವನ್ನು
ಇಟ್ಟುಕೊಳ್ಳಬೇಕು. ಈ ನಿಟ್ಟಿನಲ್ಲಿ ನಮಗೆ ಸಹಾಯ ಮಾಡುವುದೇ ಪ್ರಾರ್ಥನೆ ಮತ್ತು ಯೋಗ. ಅಂತೆಯೇ ಒಳ್ಳೆಯ
ಸಂಬಂಧವನ್ನು ನಾವು ಪರರಲ್ಲಿಯೂ ಇಟ್ಟುಕೊಳ್ಳಬೇಕು. ಪ್ರಕೃತಿಯನ್ನು ಪ್ರೀತಿಸಬೇಕು ಅದರ ಜೊತೆಗೆ
ಒಡನಾಟವಿರಬೇಕು" ಎಂಬ ಅರ್ಥಪೂರ್ಣವಾದ ಸಂದೇಶವನ್ನು ನೀಡಿದರು.
ಅತಿಥಿಯಾಗಿ ಭಾಗವಹಿಸಿದ ಸಂತ ಫಿಲೋಮಿನಾ ಪದವಿ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ
ಪ್ರಕಾಶ್ ಮೊಂತೇರೊರವರು ಈ ಸಂದರ್ಭದಲ್ಲಿ ಮಾತನಾಡುತ್ತಾ "ದೇಹ, ಆತ್ಮ ಮತ್ತು ಮನಸ್ಸುಗಳ
ಆರೋಗ್ಯವುಳ್ಳವನು ಸದೃಢನಾಗಿರುತ್ತಾನೆ. ಪ್ರಸ್ತುತ ದಿನಗಳಲ್ಲಿ ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ಮನೋ
ಮಾಲಿನ್ಯ. ಈ ವಿಷಯದಲ್ಲಿ ಯೋಗವು ದೇಹ ಆತ್ಮ ಮತ್ತು ಮನಸ್ಸುಗಳನ್ನು ಶುದ್ದಿಗೊಳಿಸುತ್ತದೆ" ಎಂದರು.
ಅತಿಥಿಗಳಾದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ|ಅಶೋಕ್ ರಾಯನ್ ಕ್ರಾಸ್ತಾ ಹಾಗೂ ಸಂತ
ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಮುಖ್ಯ ಗುರುಗಳಾದ ವಂ|ಮಾಕ್ಸಿಂ ಡಿಸೋಜಾರವರು ಈ ಸಂದರ್ಭದಲ್ಲಿ
ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಎನ್.ಸಿ.ಸಿ. ನೇವಲ್ ವಿಂಗ್ ಅಧಿಕಾರಿ ಕ್ಲೆಮೆಂಟ್ ಪಿಂಟೋ
ಸ್ವಾಗತಿಸಿದರು. ಸಂತ ಫಿಲೋಮಿನಾ ಕಾಲೇಜಿನ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ. ಚಂದ್ರಶೇಖರ್ ಕೆ.
ವಂದಿಸಿದರು. ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಎನ್.ಸಿ.ಸಿ. ನೇವಿ ವಿಂಗ್ ಅಧಿಕಾರಿ ತೇಜಸ್ವಿ ಭಟ್
ಕಾರ್ಯಕ್ರಮ ನಿರೂಪಿಸಿದರು. ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ
ಪುಷ್ಪಾ ಎನ್. ಉಪಸ್ಥಿತರಿದ್ದು, ಕಾಲೇಜಿನ ಹಿತ್ಯೇಷಿ ಹಾಗೂ ಹಿರಿಯ ವಿದ್ಯಾರ್ಥಿ ಶ್ರೀ ಪೊನ್ನಪ್ಪ ಎ ಎಸ್’ರವರು
ಸಂಭ್ರಮಾಚರಣೆಯ ಛಾಯಾಚಿತ್ರವನ್ನು ಸೆರೆ ಹಿಡಿಯುವ ಮೂಲಕ ಸಹಕರಿಸಿದರು.
ಸಂತ ಫಿಲೋಮಿನಾ ಪದವಿ ಕಾಲೇಜು (ಸ್ವಾಯತ್ತ) ಎನ್.ಸಿ.ಸಿ. ಆರ್ಮಿ ವಿಂಗ್ ಅಧಿಕಾರಿ ಕ್ಯಾಪ್ಟನ್ ಜೋನ್ಸನ್
ಡೇವಿಡ್ ಸಿಕ್ವೇರ ಮತ್ತು ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಎನ್.ಸಿ.ಸಿ. ಆರ್ಮಿ ವಿಂಗ್ ಅಧಿಕಾರಿ ಚೀಫ್
ಆಫೀಸರ್ ಪೀಟರ್ ನರೇಶ್ ಲೋಬೋ ಮುಂದಾಳತ್ವದಲ್ಲಿ ಯೋಗ ಸಂಭ್ರಮವನ್ನು ಆಯೋಜಿಸಲಾಯಿತು.
ಸಂತ ಫಿಲೋಮಿನಾ ಪದವಿ (ಸ್ವಾಯತ್ತ) ಹಾಗೂ ಪದವಿಪೂರ್ವ ಕಾಲೇಜುಗಳ ಎನ್.ಸಿ.ಸಿ. ಆರ್ಮಿ ಮತ್ತು ನೇವಿ
ಕೆಡೆಟ್‌ಗಳು, ಸಂತ ಫಿಲೋಮಿನಾ ಪ್ರೌಢಶಾಲೆಯ ಆರ್ಮಿ ಮತ್ತು ನೇವಿ ಎನ್.ಸಿ.ಸಿ. ಕೆಡೆಟ್‌ಗಳು ಹಾಗೂ ಸಂತ
ಫಿಲೋಮಿನಾ ಪದವಿ (ಸ್ವಾಯತ್ತ) ಕಾಲೇಜಿನ ಎನ್.ಎಸ್.ಎಸ್. ಸ್ವಯಂಸೇವಕರು, ಸಂಸ್ಥೆಗಳ ಉಪನ್ಯಾಸಕ ವೃಂದ
ವಿವಿಧ ಆಸನಗಳನ್ನೊಳಗೊಂಡ ಸುಮಾರು 30 ನಿಮಿಷಗಳ ಪ್ರಾಯೋಗಿಕ ಯೋಗ ಸಂಭ್ರಮಾಚರಣೆಯಲ್ಲಿ
ಪಾಲ್ಗೊಂಡರು.








