ಇರಾನ್ (Iran) ಮತ್ತು ಅಮೆರಿಕ(America) ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ, ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಧ್ವಜ ಹೊಂದಿರುವ ಎರಡು ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ಗುಂಡಿನ ದಾಳಿ ನಡೆಸಿದೆ. ಈ ಗಂಭೀರ ಘಟನೆಯ ಕುರಿತು ಪ್ರಶ್ನೆ ಕೇಳಿದ ವರದಿಗಾರರ (News Reporter) ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donal Trump) ಕಿಡಿಕಾರಿದ್ದು, ಹೊರಗೆ ಹೋಗಿ!

Out!) ಎಂದು ಕೂಗುವ ಮೂಲಕ ಸುದ್ದಿಗೋಷ್ಠಿಯನ್ನು ಅರ್ಧಕ್ಕೆ ನಿಲ್ಲಿಸಿರುವ ವೀಡಿಯೊ ಈಗ ಜಾಗತಿಕವಾಗಿ ವೈರಲ್ ಆಗಿದೆ.

ವರದಿಗಾರರ ಪ್ರಶ್ನೆಗೆ ಟ್ರಂಪ್ ಗರಂ
ಶ್ವೇತಭವನದ ಓವಲ್ ಕಚೇರಿಯಲ್ಲಿ ಕಾರ್ಯಕಾರಿ ಆದೇಶವೊಂದಕ್ಕೆ ಸಹಿ ಹಾಕುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಮೇಲೆ ನಡೆದ ದಾಳಿ ಮತ್ತು ಇರಾನ್ ಜೊತೆಗಿನ ಹೆಚ್ಚುತ್ತಿರುವ ಸಂಘರ್ಷದ ಬಗ್ಗೆ ಪತ್ರಕರ್ತರು ಪ್ರಶ್ನೆಗಳನ್ನು ಕೇಳಲು ಪ್ರಯತ್ನಿಸಿದರು. ಆದರೆ, ಈ ವಿಷಯದ ಬಗ್ಗೆ ಮಾತನಾಡಲು ಸಿದ್ಧರಿಲ್ಲದ ಟ್ರಂಪ್, ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪತ್ರಕರ್ತರನ್ನು ತಕ್ಷಣವೇ ಅಲ್ಲಿಂದ ಹೊರಹೋಗುವಂತೆ ಆದೇಶಿಸಿದರು. ಈ ಅನಿರೀಕ್ಷಿತ ವರ್ತನೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಭಾರತೀಯ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ
ಶನಿವಾರ ಓಮನ್ ಸಮೀಪದ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ಗನ್‌ಬೋಟ್‌ಗಳು ಭಾರತದ ಧ್ವಜವಿರುವ ಎರಡು ಬೃಹತ್ ತೈಲ ಟ್ಯಾಂಕರ್‌ಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಮತ್ತು ಹಡಗಿಗೆ ಯಾವುದೇ ದೊಡ್ಡ ಹಾನಿಯಾಗಿಲ್ಲ. ಆದರೆ, ದಾಳಿಯ ಬೆನ್ನಲ್ಲೇ ಎರಡೂ ಹಡಗುಗಳು ತಮ್ಮ ಪ್ರಯಾಣವನ್ನು ಅರ್ಧಕ್ಕೆ ನಿಲ್ಲಿಸಿ ಹಿಂದಕ್ಕೆ ತಿರುಗುವಂತಾಯಿತು. ಇವುಗಳಲ್ಲಿ ಒಂದು ಅತ್ಯಂತ ಬೃಹತ್ ಕಚ್ಚಾ ತೈಲ ವಾಹಕ (VLCC) ಹಡಗಾಗಿದ್ದು, ಭಾರಿ ಪ್ರಮಾಣದ ತೈಲವನ್ನು ಸಾಗಿಸುತ್ತಿತ್ತು.

Leave a Reply

Your email address will not be published. Required fields are marked *

Join WhatsApp Group
error: Content is protected !!