ಪುತ್ತೂರು, ಏಪ್ರಿಲ್ 25: ಜನಗಣತಿ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರ ತಂಡಕ್ಕೆ ಬಿಸಿಲಿನ ತೀವ್ರತೆ ನಡುವೆ ಆರೋಗ್ಯ ರಕ್ಷಣೆಗಾಗಿ ರೋಟರಿ ಕ್ಲಬ್ ಪುತ್ತೂರು ಸಿಟಿ ವತಿಯಿಂದ 600 ಪ್ಯಾಕ್ ORS ಪೌಡರ್ ನೀಡಲಾಯಿತು.
ನಗರ ಸಭೆ ಪೌರಾಯುಕ್ತರ ಮೂಲಕ ಈ ಪೌಡರ್ ವಿತರಣೆ ಮಾಡಲಾಗಿದ್ದು, ಮನೆ ಮನೆಗೆ ತೆರಳಿ ಜನಗಣತಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಇದರಿಂದ ಸಹಾಯವಾಗಲಿದೆ ಎಂದು ತಿಳಿಸಲಾಗಿದೆ.
ಇತ್ತೀಚೆಗೆ ಬಿಸಿಲಿನ ತಾಪಮಾನ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಜನಗಣತಿ ಕಾರ್ಯ ಕಠಿಣ ಸವಾಲಾಗಿದ್ದು, ಈ ಸಂದರ್ಭ ಸಂಘ ಸಂಸ್ಥೆಗಳ ಸಹಕಾರ ಶ್ಲಾಘನೀಯವಾಗಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ರೊ. ಉಲ್ಲಾಸ ಪೈ, ರೊ. ಜಾನ್ ಕೂಟಿನ್ಹ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!