ಮುಕ್ವೆ, ಏ.25: ಅನ್‌ನೂರ್ ಹನಫಿ ಕಮಿಟಿ ಮುಕ್ವೆ ಇದರ ಅಧೀನದಲ್ಲಿರುವ ಅನ್‌ನೂರ್ ಹನಫಿ ಯಂಗ್‌ಮೆನ್ಸ್ ಕಮಿಟಿ, ಮುಕ್ವೆ–ಪುರುಷರಕಟ್ಟೆ ವತಿಯಿಂದ 5ನೇ ವಾರ್ಷಿಕೋತ್ಸವದ ಅಂಗವಾಗಿ ನಅತೇ ಶರೀಫ್ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮ ಏಪ್ರಿಲ್ 26ರಂದು (ಆದಿತ್ಯವಾರ) ಮುಕ್ವೆ ಜಂಕ್ಷನ್‌ನಲ್ಲಿ ಮಗ್ರಿಬ್ ಬಳಿಕ ನಡೆಯಲಿದೆ.
ಕಾರ್ಯಕ್ರಮದಲ್ಲಿ ನಅತೇ ಶರೀಫ್‌ಗೆ ದಕ್ಷಿಣ ಆಫ್ರಿಕಾದ ಬಹು. ಶಬೀರ್ ಬರಕಾತಿ ನೇತೃತ್ವ ವಹಿಸಲಿದ್ದು, ಬುರ್ದಾ ಆಲಾಪನೆಯನ್ನು ಪಾಲಕ್ಕಾಡ್ (ಕೇರಳ) ನ ಬಹು. ಖಾಸಿಮ್ ಅಲ್ ಹಸನಿ ಕಾಮಿಲ್ ಸಖಾಫಿ ಅವರ ತಂಡ ನಡೆಸಲಿದೆ.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್‌ನೂರ್ ಹನಫಿ ಯಂಗ್‌ಮೆನ್ಸ್ ಕಮಿಟಿ ಅಧ್ಯಕ್ಷ ಶೇಖ್ ಮಹಮ್ಮದ್ ಅಫ್ಘಾನ್ ನೆರಿಗೇರಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಬಹು. ಹಝ್ರತ್ ಮೌಲಾನಾ ನಬೀ ಮಿಸಬಹಿ ನೆರವೇರಿಸಲಿದ್ದು, ದುವಾ ಕಾರ್ಯಕ್ರಮವನ್ನು ಇರ್ಷಾದ್ ಫೈಝಿ ಪಾಲ್ತಾಡ್ ನಡೆಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ,R.J.M ಮುಕ್ವೆಯ ಅಧ್ಯಕ್ಷ ಖಾಸಿಂ ಹಾಜಿ ಎಂ.ಕೆ., ಅನ್‌ನೂರ್ ಹನಫಿ ಕಮಿಟಿ ಸಲಹೆಗಾರರಾದ ಅಬ್ದುಲ್ ಹಮೀದ್ ಹನೀಫಿ ನೆರಿಗೇರಿ ಹಾಗೂ ಶೇಖ್ ಜೈನುದ್ದೀನ್ ಪುತ್ತೂರು ಉಪಸ್ಥಿತರಿರುವರು.
ಧಾರ್ಮಿಕ ಮುಖಂಡರಾಗಿ ಮೌಲಾನಾ ಮುಪ್ತಿ ನಈಮ್ ರಝಾ ಸಾದಿ ಅಮ್ಮದಿ (ಖತೀಬರು, ಅಲ್ ಹಬೀಬ್ ಜಾಮಿಯಾ ಹನಫಿ ಮಸ್ಜಿದ್ ಮರೀಲ್), ವಜಹತ್ ಹುಸೇನ್ (ಖತೀಬರು, ಮಸ್ಜಿದ್ ಎ ನೂರಿ ಸುನ್ನೀ ಹನಫಿ ಜುಮಾ ಮಸೀದಿ ಬನ್ನೂರು), ಹಾಫಿಝ್ ಮುಹಮ್ಮದ್ ಇಮ್ರಾನ್ ರಝಾ (ಖತೀಬರು, ಖಿಲ್ ಹನಫಿ ಜುಮಾ ಮಸೀದಿ ಅಂಕತಡ್ಕ) ಭಾಗವಹಿಸಲಿದ್ದಾರೆ.
ಇದೇ ವೇಳೆ ಅನ್‌ನೂರ್ ಹನಫಿ ಕಮಿಟಿ ಮಾಜಿ ಅಧ್ಯಕ್ಷ ಶೇಖ್ ಉಮರ್ ಫಾರೂಕ್, SDMC ಅಧ್ಯಕ್ಷ ಅಬ್ದುಲ್ ಲತೀಫ್ ನೆರಿಗೇರಿ, ಉದ್ಯಮಿಗಳಾದ ಮುಹಮ್ಮದ್ ಇಲ್ಯಾಸ್ ಮಣಿಯ, ಜೈನುದ್ದೀನ್ ಸಾಹೇಬ್, ಸಲೀಂ (ಎಂ.ಜಿ.ರೋಡ್), ಶೇಖ್ ಅಬ್ದುಲ್ ಮುನಾಫ್ ಮಣಿಯ ಹಾಗೂ ಫಿರೋಝ್ ಮಡಿಕೇರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು.
ಅಲ್ಲದೆ ವಿವಿಧ ಮಸೀದಿ ಹಾಗೂ ಸಂಘಟನೆಗಳ ಅಧ್ಯಕ್ಷರಾದ ರಝಕ್ ಖಾನ್, ಶೇಖ್ ಅಹ್ಮದ್, ಶೇಖ್ ಆದಂ ಸಾಹೇಬ್, ಅಬೂಬಕ್ಕರ್ ಹಾಜಿ ಮಾಯಂಗಳ, ರಫೀಕ್ ಮಣಿಯ (SKSSF), ಹಸನ್ ಸಅದಿ (SSF), ಉಸ್ಮಾನ್ ಚಿಕ್ಕಳ (ಗರೀಬ್ ನವಾಝ್ ಚಾರಿಟೇಬಲ್ ಟ್ರಸ್ಟ್) ಭಾಗವಹಿಸಲಿದ್ದಾರೆ. ಸಲೀಂ ನೆರಿಗೇರಿ (ದುಬೈ), ಸಯ್ಯದ್ ಗೌಸ್ ಸಾಹೇಬ್ ಹಾಗೂ ಇತರ ಗಣ್ಯರು  ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಶಮೀಮ್ ನೆರಿಗೇರಿ ಸ್ವಾಗತ ಕೋರಲಿದ್ದು, ಸಂಶುದ್ದೀನ್ ಎನ್ ಧನ್ಯವಾದ ಅರ್ಪಿಸಲಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!