ಪುತ್ತೂರು, ಜು. 23: ಪುತ್ತೂರು ಆದರ್ಶ ಆಸ್ಪತ್ರೆ ಸಮೀಪ ವ್ಯಾಪಾರ ನಡೆಸುತ್ತಿದ್ದ ರಮೇಶ್ ಗೌಡ (48) ಅವರು ಬುಧವಾರ ರಾತ್ರಿ ಸಂಭವಿಸಿದ ಹೃದಯಾಘಾತದಿಂದ ನಿಧನರಾದರು.ಮೂಲತಃ ಬಂದಾರು ನಿವಾಸಿಯಾಗಿದ್ದ ರಮೇಶ್ ಗೌಡ ಅವರು ಹಲವು ವರ್ಷಗಳಿಂದ ಪುತ್ತೂರು ಆದರ್ಶ ಆಸ್ಪತ್ರೆ ಸಮೀಪ ವ್ಯಾಪಾರ ನಡೆಸುತ್ತಿದ್ದು, ಸೂತ್ರಬೆಟ್ಟುವಿನಲ್ಲಿ ಕುಟುಂಬ ಸಮೇತರಾಗಿ ವಾಸಿಸುತ್ತಿದ್ದರು.ಜು. 22ರಂದು ರಾತ್ರಿ ಮನೆಯಲ್ಲಿ ಊಟ ಮಾಡುವ ವೇಳೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಕುಟುಂಬಸ್ಥರು ಅವರನ್ನು ಆದರ್ಶ ಆಸ್ಪತ್ರೆಗೆ ಕರೆತಂದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.ಮೃತರು ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದರೆ .









